ಉದಯವಾಹಿನಿ, ಬೆಂಗಳೂರು: ಕೊಲೆ ಆರೋಪಿ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಮತ್ತೆ ಅನುಚಿತ ವರ್ತನೆ ತೋರೆದ್ರೆ ವರ್ಗಾವಣೆ ಮಾಡೋಕೆ ಐಜಿಪಿಗೆ ಅವಕಾಶ ಇದೆ ಎಂದು ಕೋರ್ಟ್ ಹೇಳಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನ ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.ಸದ್ಯಕ್ಕೆ ಬೇರೆಡೆಗೆ ಶಿಫ್ಟ್ ಮಾಡೋದಕ್ಕೆ ಸಕಾರಣ ಇಲ್ಲ. ಮತ್ತೆ ಅನುಚಿತ ವರ್ತನೆ ತೋರಿದ್ರೆ ವರ್ಗಾವಣೆ ಮಾಡೋಕೆ ಐಜಿಪಿಗೆ ಅವಕಾಶ ಇದೆ. ಐಜಿಪಿ ಅಧಿಕಾರ ಬಳಸಬಹುದು ಎಂದು ಕೋರ್ಟ್ ಹೇಳಿದೆ.
