ಉದಯವಾಹಿನಿ, ಕೊಪ್ಪಳ: ಉತ್ತರಾದಿ ಮಠ ಹಾಗೂ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಭಕ್ತರು ಆನೇಗೊಂದಿಯಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿಚಾರವಾಗಿ ಮತ್ತೆ ಹೋರಾಟ ಆರಂಭಿಸಿದ್ದಾರೆ. ವಿಜಯನಗರ ಅರಸರು ಹಾಗು ಅವರ ಮೊದಲು ಶ್ರೇಷ್ಠ ಯತಿಗಳು ಕೊಪ್ಪಳ ಜಿಲ್ಲೆಯ ಆನೇಗೊಂದಿಯ ಬಳಿ ವೃಂದಾವನಸ್ಥರಾಗಿದ್ದಾರೆ. ಇಲ್ಲಿ ಒಟ್ಟು 9 ಯತಿಗಳು ವೃಂದಾವನವಿರುವ ಹಿನ್ನೆಲೆಯಲ್ಲಿ ಇದಕ್ಕೆ ನವವೃಂದಾವನ ಗಡ್ಡೆ ಎಂಬ ಹೆಸರು ಇದೆ. ತುಂಗಭದ್ರಾ ನದಿಯ ಮಧ್ಯೆದಲ್ಲಿರುವ ಈ ಗಡ್ಡೆಗೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಈ ಮಧ್ಯೆ ಇಲ್ಲಿರುವ ಒಂದು ವೃಂದಾವನ ಜಯತೀರ್ಥರದ್ದು ಎಂದು ರಾಯರ ಮಠದವರ ವಾದವಾದರೆ ಜಯತೀರ್ಥರು ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ವೃಂದಾವನಸ್ಥರಾಗಿದ್ದಾರೆ. ಇಲ್ಲಿರುವುದು ರಘುವರ್ಯ ತೀರ್ಥರ ವೃಂದಾವನ ಎಂಬುದು ಉತ್ತರಾದಿ ಮಠದವರ ವಾದವಾಗಿದೆ.
ಈ ಹಿನ್ನೆಲೆಯಲ್ಲಿ ವಿಪ್ರ ಸಮಾಜದವರು ಎರಡು ಕಡೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಸೋಮವಾರ ಕಲಬುರಗಿಯಲ್ಲಿ ವಿಪ್ರ ಸಮಾಜದವರು ಪ್ರತಿಭಟನೆ ನಡೆಸಿ ಜಯತೀರ್ಥರ ವೃಂದಾವನವು ಮಳಖೇಡದಲ್ಲಿದೆ ಕೆಲವರು ವಿನಾಕಾರಣ ವಿವಾದ ಸೃಷ್ಠಿಸುತ್ತಿದ್ದಾರೆ. ಈ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರು. ಮಂಗಳವಾರ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವವೃಂದಾವನ ಸೇವಾ ಸಮಿತಿಯಿಂದ ಸುಮಾರು 2000 ಮಂದಿ ವಿಪ್ರ ಸಮಾಜದವರು ಬೃಹತ್ ಪ್ರತಿಭಟನೆ ನಡೆಸಿದರು. ಇದು ಜಯತೀರ್ಥರ ವೃಂದಾವನ 630 ವರ್ಷಗಳ ಹಿಂದೆ ಜಯತೀರ್ಥರು ಇಲ್ಲಿ ವೃಂದಾವನಸ್ಥರಾಗಿದ್ದಾರೆ. ಇದಕ್ಕೆ ದಾಖಲೆ ಇದೆ. ಆದರೆ ಇಲ್ಲಿ ಇತಿಹಾಸ ತಿರುಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವರದಿಯ ಕೊನೆಯ ಭಾಗವು ಸ್ಪಷ್ಟವಾಗಿಲ್ಲ. ಅತ್ಯಂತ ಕಳಪೆ ಮಟ್ಟದ ವರದಿ.
we try for better news
we will try for better news