
ಉದಯವಾಹಿನಿ,ಚಿಂಚೋಳಿ: 18ವರ್ಷ ತುಂಬಿದ ಎಲ್ಲಾ ಯುವಕರು ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಿ ಭವ್ಯ ಭಾರತದ ಭವಿಷ್ಯ ರೂಪಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.ಪಟ್ಟಣದ ಚಂದಾಪೂರದ ಸರಕಾರಿ ಪ್ರಥಮ ದರ್ಜೆ ಕಾಲೇಜೀನ ಸಭಾಂಗಣದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಮತ್ತು ಪುರಸಭೆ,ಚುನಾವಣಾ ಸಾಕ್ಷರತಾ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೂತನ ಮತದಾರರ ನೊಂದಣಿ ಜಾಗೃತಿ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಭಾರತ ಸಂವಿಧಾನವು ವಿಶ್ವದಲ್ಲಿಯೇ ಮಾದರಿಯಾಗಿದೆ,ಪ್ರತಿಯೊಬ್ಬರು ಮತದಾನ ಮಾಡುವುದು ಕಡ್ಡಾಯ ನಮ್ಮ ಹಕ್ಕು ನಾವು ಚಲಾಯಿಸಬೇಕು,ಮತಕ್ಕೆ ಮಹಳಷ್ಟು ಮಹತ್ವವಿದೆ ಮುಂಬರುವ ತಾಪಂ.ಜಿಪಂ.ಲೋಕಸಭೆ ಚುನಾವಣೆಯಲ್ಲಿ 17ವರ್ಷ ಮುಗಿದು 18ವರ್ಷ ತುಂಬುವ ಎಲ್ಲಾ ಯುವಕರು ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ತಪ್ಪದೆ ಮತ ಚಲಾಯಿಸಿ ಬೇರೆಯವರಿಗೂ ಮತದಾನ ಮಾಡುವ ಜಾಗೃತಿ ಮೂಡಿಸಬೇಕು ಎಂದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್ ಮಾತನಾಡಿದ ಅವರು,18ವರ್ಷ ತುಂಬಿದ ಯುವಕರು ಯುವತಿಯರು ತಪ್ಪದೆ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿ ಮತ ಚಲಾವಣೆ ಮಾಡಿ ಮತದಾನದಲ್ಲಿ ಬಹಳಷ್ಟು ದೊಡ್ಡ ಶಕ್ತಿಯಿದೆ ಮತದಾನದಿಂದ ದೇಶದಲ್ಲಿ ಒಳ್ಳೆಯ ಜನಪ್ರತಿನಿಧಿ ಗೆಲ್ಲಿಸಿ ಭವ್ಯ ಭಾರತ ದೇಶದ ಭವಿಷ್ಯ ರೂಪಿಸಬಹುದು ಎಂದರು.ಈ ಸಂದರ್ಭದಲ್ಲಿ ಕಾಲೇಜೀನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಸಾವರ್ಕರ್,ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಪ್ರೊ.ಮಲ್ಲಪ್ಪ ತೋಟ್ನಳ್ಳಿ,ಮಲ್ಲಿಕಾರ್ಜುನ,ಬಸವರಾಜ, ಕಾಲೇಜು ವಿದ್ಯಾರ್ಥಿಗಳು,ವಿಧ್ಯಾರ್ಥಿನಿಯರು ಇದ್ದರು.

I’m shashikanth all students