ಉದಯವಾಹಿನಿ , ತಿರುವನಂತಪುರಂ: ಸೆಕ್ಸ್ ಅಡ್ಡಿಪಡಿಸುತ್ತಿದೆ ಅಂತ ತನ್ನ 1 ವರ್ಷದ ಮಗುವನ್ನ ಕೊಂದ ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿವೆ. ಮಗುವಿನ ತಂದೆಯೂ ಆಗಿರುವ ಕೊಲೆ ಆರೋಪಿ ಶಿಜಿಲ್ ಹಲವು ಸೆಕ್ಸ್ ಚಾಟ್ ಗ್ರೂಪ್ಗಳಲ್ಲಿ ಆಕ್ಟೀವ್ ಆಗಿದ್ದ ಅನ್ನೋದು ಪೊಲೀಸರ ವಿವಾರಣೆ ವೇಳೆ ಬೆಳಕಿಗೆ ಬಂದಿದೆ.
ಹೌದು. ಆರೋಪಿ ಶಿಜಿಲ್ ಮೊಬೈಲ್ ಪರಿಶೀಲಿಸಿದಾಗ ಸೆಕ್ಸ್ ಚಾಟ್ಗಳ ಆಗರವೇ ಕಂಡುಬಂದಿದೆ. ಹಲವು ಸೆಕ್ಸ್ ಚಾಟ್ ಗ್ರೂಪ್ಗಳಲ್ಲಿ ಆಕ್ಟೀವ್ ಆಗಿದ್ದ ಶಿಜಿಲ್, ಮಹಿಳೆಯರ ಜೊತೆ ಸೆಕ್ಸ್ ಚಾಟ್ ಗೆಂದೇ ಗ್ರೂಪ್ ಮಾಡಿಕೊಂಡಿದ್ದ ಅನ್ನೋದು ಗೊತ್ತಾಗಿದೆ. ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರಿದಿದೆ.
ಇತ್ತೀಚೆಗಷ್ಟೇ ತಿರುವನಂತಪುರಂನ ನೆಯ್ಯಟ್ಟಿಂಕರದಲ್ಲಿ 1 ವರ್ಷದ ಮಗು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಬಳಿಕ ಪೊಲೀಸರ ತನಿಖೆಯಲ್ಲಿ, ಸೆಕ್ಸ್ ಗೆ ಅಡ್ಡಿಪಡಿಸಿದ್ದಕ್ಕೆ ತಂದೆಯೇ ಮಗುವನ್ನ ಕೊಲೆಗೈದಿರುವುದು ಗೊತ್ತಾಯಿತು.
