ಉದಯವಾಹಿನಿ , ನ್ಯೂಜಿಲೆಂಡ್‌ ವಿರುದ್ದದ ಮೂರನೇ ಟಿ20ಐ ಪಂದ್ಯದಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಹಾಗೂ 20 ಎಸೆತಗಳಲ್ಲಿ 68 ರನ್‌ಗಳನ್ನು ಗಳಿಸಿದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ , ಭಾರತ ತಂಡದ 8 ವಿಕೆಟ್‌ ಗೆಲುವಿಗೆ ನೆರವು ನೀಡಿದರು. ಇದರ ಹೊರತಾಗಿಯೂ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಹಾಗೂ ಮೆಂಟರ್‌ ಯುವರಾಜ್‌ ಸಿಂಗ್‌ , ಅಭಿಷೇಕ್‌ ಶರ್ಮಾರ ಕಾಲೆಳೆದಿದ್ದಾರೆ. ನಿಮ್ಮಿಂದ ಸಾಧ್ಯವಾಗಲಿಲ್ಲ, ಆದರೂ ಚೆನ್ನಾಗಿ ಆಡಿದ್ದೀರಿ ಎಂದು ಹೇಳಿದ್ದಾರೆ. ಯುವರಾಜ್‌ ಸಿಂಗ್‌ ಈ ರೀತಿ ಕಾಲೆಳೆಯಲು ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.

ಈ ಇನಿಂಗ್ಸ್‌ ಮೂಲಕ ಅಭಿಷೇಕ್‌ ಶರ್ಮಾ ಭಾರತದ ಪರ ಎರಡನೇ ಅತ್ಯಂತ ವೇಗದ ಟಿ20ಐ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆದರೆ, ಈ ಸಾಧಕರ ಪಟ್ಟಿಯಲ್ಲಿ ಯುವರಾಜ್‌ ಸಿಂಗ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಕೇವಲ 12 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಯುವರಾಜ್‌ ಈ ದಾಖಲೆಯನ್ನು ಬರೆದಿದ್ದರು. ಈ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್‌ ವಿರುದ್ಧ ಏಕೈಕ ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸಿದ್ದರು ಎಂಬುದನ್ನು ಇದೀಗ ಸ್ಮರಿಸಿಕೊಳ್ಳಬಹುದು.ಇದನ್ನು ಉಲ್ಲೇಖಿಸಿ ಯುವರಾಜ್‌ ಸಿಂಗ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿ, ತಮ್ಮ ಶಿಷ್ಯ ಅಭಿಷೇಕ್‌ ಶರ್ಮಾ ಅವರನ್ನು ಕೆಣಕಿದ್ದಾರೆ. “ಇನ್ನೂ ನಿಮ್ಮಿಂದ 12 ಬಾಲ್‌ಗಳಲ್ಲಿ 50 ರನ್‌ ಗಳನ್ನು ಗಳಿಸಲು ಸಾಧ್ಯವಾಗಿಲ್ಲ. ಇದು ನಿಮ್ಮಿಂದ ಸಾಧ್ಯವೇ? ಚೆನ್ನಾಗಿ ಆಡಿದ್ದೀರಿ-ಇದೇ ರೀತಿ ಶಕ್ತಿಯುತವಾಗಿ ಆಡಿ,” ಎಂದು ಯುವರಾಜ್‌ ಸಿಂಗ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!