ಉದಯವಾಹಿನಿ, ಔರಾದ್ : ಭಾರತದ ಮಾಜಿ ರಾಷ್ಟ್ರಪತಿ ಉಪರಾಷ್ಟ್ರಪತಿ, ಶಿಕ್ಷಕರು ಹಾಗೂ ತತ್ವಜ್ಞಾನಿಗಳಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡ ಸೃಜನಶೀಲ ವ್ಯಕ್ತಿ ಭಾರತ ರತ್ನ ಪುರಸ್ಕೃತ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಅಜಯಕುಮಾರ ದುಬ್ದೆ ಹೇಳಿದರು.ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರುವಿನ ಗುಲಾಮ ಆಗುವ ತನಕ ದೊರೆಯದ ಮುಕ್ತಿ ಎನ್ನುವ ಹಾಗೆ ಶಿಷ್ಯರು ಗುರುವಿಗೆ ಗೌರವದಿಂದ ಕಾಣಬೇಕು. ಸಮಾಜ ಬದಲಾವಣೆಯಲ್ಲಿ ಗುರುವಿನ ಪಾತ್ರ ಅತಿ ಮುಖ್ಯ ಎಂದರು.ಸಂತಪುರ್ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿಗಳಾದ ಡಾ. ರೇಣುಕಾ ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಕಂಡು ಬಂದು ಪ್ರಗತಿಯತ್ತ ಸಾಗುತ್ತಿದೆ. ಶಿಕ್ಷಣ ಬದಲಾವಣೆಗೆ ಮುಖ್ಯ ಕಾರಣಕರ್ತರಾದ ಶಿಕ್ಷಕರು. ಆರೋಗ್ಯಕಡೆ ಯುವಕರು ಧ್ಯಾನವಹಿಸಿ ಸ್ವಸ್ಥ ದೇಹ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿದರು. ಆಸ್ಪತ್ರೆ ಸಿಬ್ಬಂದಿಗಳಾದ ಕಿರಣಕುಮಾರ ಬಿರಾದರ. ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಸಿದ್ದಾರೂಢ ಪಾಂಚಾಳ, ಈರಮ್ಮ ಕಟ್ಟಗಿ, ಅಂಬಿಕಾ ವಿಶ್ವಕರ್ಮ,ವನದೇವಿ ಎಕ್ಕಳೆ,ಮೀರಾತಾಯಿ ಕಾಂಬಳೆ ಇದ್ದರು.

Leave a Reply

Your email address will not be published. Required fields are marked *

error: Content is protected !!