ಉದಯವಾಹಿನಿ,ಚಿಂಚೋಳಿ: 1917ರಲ್ಲಿ ಸಿದ್ದಗಂಗಾ ಮಠದಲ್ಲಿ ಅಕ್ಷರ ದಾಸೋಹ ಅನ್ನ ದಾಸೋಹ ಪ್ರಾರಂಭವಾಗಿ ಎಲ್ಲಾ ಜಾತಿ ಧರ್ಮದ ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ,ದೇಶದಲ್ಲಿ ಹೀಗೆ ಸರ್ವಧರ್ಮದ ಜನಾಂಗಕ್ಕೆ ಒಗ್ಗಟ್ಟಿಗೆ ತೆಗೆದುಕೊಂಡು ಹೋಗುವ ವೀರಶೈವ ಲಿಂಗಾಯತ ಸಮಾಜವಿದೆ ಎಂದು ನಿಡಗುಂದಾ ಕಂಚಾಳಕುಂಟಿ ನಂದಿಶ್ವರ ಮಠದ ಪರಮಪೂಜ್ಯ ಷ.ಬ್ರ.ಕರುಣೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ತಾಲ್ಲೂಕಾ ವೀರಶೈವ ಸಮಾಜದ ವತಿಯಿಂದ 2022-23ನೇ ಸಾಲಿನ ಹತ್ತನೇ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಹಾಗೂ ವೀರಶೈವ ಸಮಾಜದ ಗ್ರಾಪಂ 2ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾಗೂ ಸಮಾಜದ ಐದು ವೈದ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು,ಸಿದ್ದಗಂಗಾ ಮಠದಲ್ಲಿ ಸುಮಾರು 25ಲಕ್ಷ ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಮಾಣಿಕವಾಗಿ ಕೆಲಸ ಮಾಡಿದರೆ ಉನ್ನತಮಟ್ಟಕ್ಕೆ ಸಾಗಲು ಸಾಧ್ಯವಾಗುತ್ತದೆ,ಎಲ್ಲೋರು ನನ್ನವರು ಎಂಬ ಭಾವನೆ ಮನುಷ್ಯನಲ್ಲಿ ಬರಬೇಕು,ಒಳ್ಳೆಯ ಆಚಾರ ವಿಚಾರ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಸಮಾಜದ ಸಲೂವಾಗಿ ಸರ್ಕಾರಗಳಿಗೆ ಬೇಡಿಕೆ ಕೊಡುವ ಬದಲು ವೀರಶೈವ ಲಿಂಗಾಯತ ಸಮಾಜದ ಪ್ರತಿ ಮನೆಗೆ 1,000ರೂ.ಪಟ್ಟಿ ಹಾಕಿದರೆ ಸಮಾಜಕ್ಕಾಗಿ ಬೇಕಾಗುವ ಭವನ,ರುದ್ರಭೂಮಿ ವಸತಿ ನಿಲಯಗಳು ನಿರ್ಮಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮವನ್ನು ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣುಕುಮಾರ ಪಾಟೀಲ ಕೊಡಲಹಂಗರಗಾ ಉದ್ಘಾಟಿಸಿ ಮಾತನಾಡಿದ ಅವರು,ತಾಲ್ಲೂಕಿನಲ್ಲಿ ವೀರಶೈವ ಸಮಾಜದ ಸಂಘಟನೆ ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದೆ.
ದೇಶದಲ್ಲಿ ವೀರಶೈವ ಸಮಾಜವನ್ನು ಬಲಿಷ್ಠವಾಗಿದರು ಅನೇಕರು ಬಡವರಾಗಿದ್ದಾರೆ ಸಮಾಜ ಬೆಳೆಯಬೇಕಾದರೆ ಸಂಘಟನೆ ಅವಶ್ಯಕವಾಗಿದೆ,ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಮಹಾಪುರುಷರು ಸಹ ಮಾನವಕುಲಕ್ಕೆ ದುಡಿದವರು ಹಾಗೆ ನಾವು ಸಮಾಜಕ್ಕಾಗಿ ದುಡಿಯಬೇಕು,ಕೋಚಿಂಗ್ ಕ್ಲಾಸ್,ವಸತಿ ನಿಲಯಗಳು ಜಿಲ್ಲಾಮಟ್ಟದಲ್ಲಿಯಿವೆ ಸಮಾಜದವರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕಾ ವೀರಶೈವ ಸಮಾಜದ ಅಧ್ಯಕ್ಷ ಸಂಜೀವಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಭೀಷೇಕ್ ಪಾಟೀಲ ಸ್ವಾಗತಿಸಿದರು,ಕಾಶಿನಾಥ ಮಡಿವಾಳ ನಿರೂಪಿಸಿದರು, ಸಂಜು ಪಾಟೀಲ ಎಂಪಳ್ಳಿ ವಂದಿಸಿದರು.ಅಧ್ಯಕ್ಷತೆ ರಮೇಶ ಪಡಶೇಟ್ಟಿ ವಹಿಸಿದ್ದರು.ಈ ಸಂದರ್ಭದಲ್ಲಿ ಚಿಮ್ಮಾಯಿದ್ಲಾಯಿ ಸಿದ್ದರಾಮೇಶ್ವರ ಹಿರಿಯ ಮಠದ ಪೂಜ್ಯ ಶ್ರೀ ಷ.ಬ್ರ.ವಿಜಯ ಮಹಾಂತೇಶ್ವರ ಶಿವಾಚಾರ್ಯರು,ರಟಕಲ್ ವಿರಕ್ತ ಮಠದ ಪೂಜ್ಯ ಶ್ರೀ ಮ.ನಿ.ಪ್ರ.ಸಿದ್ದರಾಮ ಮಹಾಸ್ವಾಮಿಗಳು,ಜಿಲ್ಲಾ ಉಪಾಧ್ಯಕ್ಷ ಕಲ್ಯಾಣರಾವ ಪಾಟೀಲ,ಸಂಗಮೇಶ ನಾಗನಹಳ್ಳಿ,ಶ್ರೀಶೈಲ ಗೊಳಿ,ಬಿಸಿಎಂ ಅನುಸೋಯಾ ಚವ್ಹಾಣ,ವಿಶ್ವನಾಥ ಪಾಟೀಲ,ರೇವಣಸಿದ್ದಪ್ಪ ದಾದಾಪೂರ,ಸೋಮಯ್ಯ ಮಠಪತಿ, ಬಸವರಾಜ ಬೆಳಕೇರಿ,ವೀರೇಶ ದೇಸಾಯಿ,ಬಸವರಾಜ ಮೆಡಿಕಲ್,ಧರ್ಮಸ್ಥಳ ಗೋಪಾಲ,ರಮೇಶ ಹುಡ್ಗಿ,ಸಂತೋಷ ಕಲಶೇಟ್ಟಿ,ಶಂಕರ ಶಿವಪೂರಿ,ಚಂದ್ರಶೇಖರ ಪಾರಾ,ಸಂಗಮ್ಮ ಪಾಟೀಲ,ಮಲ್ಲಿನಾಥ,ಬಸವರಾಜ ಐನೋಳಿ,ಸಂಜು ಪಾಟೀಲ,ರೇವಣಸಿದ್ದಪ್ಪ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!