ಉದಯವಾಹಿನಿ, ಕೆಂಗೇರಿ: ಸಾಮಾಜಿಕ,ಆರ್ಥಿಕ ಪ್ರಗತಿ ಸಾಧಿಸಲು ಹೈನುಗಾರಿಕೆ ಪರ್ಯಾಯ ಉದ್ಯೋಗ ಮಾರ್ಗೋಪಾಯವಾಗಿದ್ದು ಆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದರು.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪರಸ್ಪರ ಸಹಕಾರ ನಂಬಿಕೆಯಿಂದ ಮಾತ್ರ ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದ್ದು, ಸದಸ್ಯರು, ನಿರ್ದೇಶಕರು ಅಸಹಕಾರ ನೀಡಿದರೆ ಸಹಕಾರ ಸಂಘ,ಸಂಸ್ಥೆಗಳು ಏಳಿಗೆ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಸೌಲಭ್ಯಗಳನ್ನು ರೈತರಿಗೆ ನೀಡುವ ಮೂಲಕ ರೈತರ ಅಭ್ಯುದಯಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂದರು.ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತ ಕುಟುಂಬಗಳಿಗೆ ಹಾಲು ಒಕ್ಕೂಟದ ವತಿಯಿಂದ ರಿಯಾಯತಿ ದರದಲ್ಲಿ ಮೇವು, ಚಾಪ್ ಕಟ್ಟರ್, ಮ್ಯಾಟ್, ಕುಟುಂಬ ಸದಸ್ಯರ ಮಕ್ಕಳಿಗೆ ಉನ್ನತ
