ಉದಯವಾಹಿನಿ, ಬೆಂಗಳೂರು: ಟಾಲಿವುಡ್ ನಟ ಅಲ್ಲು ಅರ್ಜುನ್ ಅವರನ್ನು ಟ್ರೋಲ್ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಭಾನುವಾರ ಮಧ್ಯಾಹ್ನ ಕೆಆರ್ ಪುರಂ ಸಮೀಪದ ಆಟದ ಮೈದಾನದಲ್ಲಿ ಘಟನೆ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಪ್ರಭಾಸ್ ಅಭಿಮಾನಿಯೊಬ್ಬನನ್ನು ಕೆಲ ಅಲ್ಲು ಅರ್ಜುನ್ ಅಭಿಮಾನಿಗಳು ಸೇರಿ ಥಳಿಸಿದ್ದಾರೆ. ಥಳಿತಕ್ಕೊಳಗಾದವನು ಅಲ್ಲು ಅರ್ಜುನ್ ಅವರನ್ನು ಕೆಲವು ತಿಂಗಳುಗಳಿಂದ ಟ್ರೋಲ್ ಮಾಡುತ್ತಿದ್ದ ಎನ್ನಲಾಗಿದೆ.
ಅಲ್ಲು ಅರ್ಜುನ್ ಅಭಿಮಾನಿಗಳು ಜೈ ಅಲ್ಲು ಅರ್ಜುನ್ ಎಂದು ಹೇಳುವಂತೆ ಬಲವಂತ ಪಡಿಸಿ ಹಲ್ಲೆ ನಡೆಸಿದ್ದಾರೆ. ಸದ್ಯ ಈ ಘಟನೆ ಪೊಲೀಸರು ಠಾಣೆ ಮೆಟ್ಟಿಲೇರಿದೆ.
ಹದ್ದು ಮೀರಿ ವರ್ತಿಸುತ್ತಿರುವ ಅಲ್ಲು ಅರ್ಜುನ್ ಅಭಿಮಾನಿಗಳ ವಿರುದ್ಧ ಖಂಡನೆ ವ್ಯಕ್ತವಾಗಿದೆ. ದಾಳಿಯ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಘಟನೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸ್ಟಾರ್ ನಟರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೇಸರೆರಚಾಟ ನಡೆಸುತ್ತಾರೆ. ಆದರೆ ಈಗ ಮಾರಣಾಂತಿಕವಾಗಿ ಹಲ್ಲೆ ಮಾಡುವ ಹಂತಕ್ಕೆ ಅಭಿಮಾನಿಗಳ ವರ್ತನೆ ಮಿತಿ ಮೀರಿರುವುದಕ್ಕೆ ನೆಟ್ಟಿಗರು ಈ ಘಟನೆ ಖಂಡಿಸಿದ್ದಾರೆ .
