ಉದಯವಾಹಿನಿ, ಕೆಜಿಎಫ್: ಸಂವಿಧಾನ ತಿದ್ದುಪಡಿ ಕುರಿತು ಮಾತನಾಡಿದ ಬಿಜೆಪಿ ಸಂಸದ ಅನಂತಕುಮಾರಹೆಗಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ನಾಮಕರಣ ಸದಸ್ಯ ಓವಿ.ಡೇವಿಡ್ ಆಗ್ರಹಪಡಿಸಿದ್ದಾರೆ.ಉರಿಗಾಂನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ನಾಮಕರಣ ಸದಸ್ಯ ಓವಿ.ಡೇವಿಡ್ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೪೦೦ ಸ್ಥಾನಗಳು ಪಡೆದರೆ ಸಂವಿಧಾನವನ್ನು ತಿದ್ದುಪಡಿ ಮಾಡಲಾಗುವುದು ಎಂದು ಪದೇ ಪದೇ ಪ್ರಚೋದನಕಾರಿ ದೇಶ ದ್ರೋಹ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರಹೆಗಡೆ ಅವರನ್ನು ಸಂಸದ ಸ್ಥಾನದಿಂದ ವಜಗೊಳಿಸಬೇಕು ಮತ್ತು ಕಾನೂನು ರೀತಿ ಕ್ರಮವಹಿಸಬೇಕು ಎಂದರು.
ಅನಂತಕುಮಾರಹೆಗಡೆ ಸಂಸದರಾಗಿ ಆಯ್ಕೆಯಾಗಲು ಸಹ ಅಂಬೇಡ್ಕರ್ ರವರ ಬರೆದ ಸಂವಿಧಾನದಿಂದ ಎಂಬುದನ್ನು ಮರೆಯಬಾರದು ಅವರ ಹೇಳಿಕೆಯಿಂದ ಅಸಂಖ್ಯಾತ ಭಾರತೀಯ ಪ್ರೇಮಿಗಳ ದಲಿತ ಅಲ್ಪಸಂಖ್ಯಾತ ಸಮುದಾಯಗಳ ಭಾವನೆಗಳಿಗೆ ದಕ್ಕೆ ತಂದಿದೆ ದೇಶದಲ್ಲಿ ಶಾಂತಿ ಕೆಡಿಸಲು ಮತ್ತು ಸಂವಿಧಾನವನ್ನು ಬದಲಾಯಿಸಲು ನಾವುಗಳು ಬಿಡುವುದಿಲ್ಲ ಸಂಸದ ಅನಂತಕುಮಾರಹೆಗಡೆ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದ್ದು ಹಿಂದಿನ ಕೇಂದ್ರ ಸಚಿವ ಸಂಸದ ಹಾಲಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಕೆಹೆಚ್.ಮುನಿಯಪ್ಪ ರವರ ಗೆಲುವಿಗಾಗಿ ಹಗಲುರಾತ್ರಿ ದುಡಿದಿದ್ದೇನೆ ಆದೇ ರೀತಿ ಶಾಸಕಿ ರೂಪಕಲಾಶಶಿಧರ್ ಪರವಾಗಿ ಕ್ಷೇತ್ರದಲ್ಲಿ ಒಡಾಡಿ ಅವರನ್ನು ಶಾಸಕಿಯಾಗಿ ಆಯ್ಕೆಯಾಗಲು ಶ್ರಮಪಟ್ಟಿದ್ದೇನೆ ಮತ್ತು ಸ್ಥಳೀಯ ನಗರಸಭೆ ಚುನಾವಣೆ ಸಂದರ್ಭದಲ್ಲಿ ೨ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದೆ ಇತರರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದಾಗ ಅವರ ಮಾತಿಗೆ ಬೆಲೆ ನೀಡಿ ಚುನಾವಣೆಯಲ್ಲಿ ಸ್ಪರ್ದೆ ಮಾಡದೆ ಅವರು ಸೂಚಿಸಿದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೇನೆ ಈ ಹಿನ್ನಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇಗೌಡರು ರಾಜ್ಯ ಸಚಿವ ಕೆಹೆಚ್.ಮುನಿಯಪ್ಪ ಶಾಸಕಿ ರೂಪಕಲಾಶಶಿಧರ್ ನನ್ನ ಸೇವೆಯನ್ನು ಗುರುತಿಸಿ ನನಗೆ ನಗರಸಭೆ ನಾಮಕರಣ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.

Leave a Reply

Your email address will not be published. Required fields are marked *

error: Content is protected !!