ಉದಯವಾಹಿನಿ, ಹುಬ್ಬಳ್ಳಿ : ಹಬ್ಬದ ಅಂಗವಾಗಿ ಉಪನಗರ ಪೆÇೀಲಿಸ್ ಠಾಣೆ ವತಿಯಿಂದ ನಗರದ ಕೃಷ್ಣ ನಗರದಲ್ಲಿ ಶಾಂತಿ ಸಭೆ ನಡೆಸಲಾಯಿತು.
ಈ ಬಾರಿ ಚುನಾವಣಾ ನೀತಿಸಂಹಿತೆಯಲ್ಲಿ ಹೋಳಿ ಹಬ್ಬ ಬಂದಿರುವ ಹಿನ್ನಲೆ ಹಾಗೂ ನಗರದಲ್ಲಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತ ಹಬ್ಬ ಆಚರಣೆ ಮಾಡಲು ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪನಗರ ಠಾಣೆ ಇನ್ಸ್ಪೆಕ್ಟರ್ ಪಿ.ವಿ ಸಾಲಿಮಠ ಅವರು ಹೋಳಿ ಹುಣ್ಣಿಮೆ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಬ್ಬದ ಆಚರಣೆ ಬಗ್ಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಉಪನಗರ ಠಾಣೆ ಪಿ.ಎಸ್.ಐಗಳಾದ ಮಲ್ಲಿಕಾರ್ಜುನ ಹೊಸೂರ್ , ಕವಿತಾ , ಎ.ಎಸ್.ಐ ಬೀಜಲಿ ಹಾಗೂ ಉಪನಗರ ಠಾಣೆ ಸಿಬ್ಬಂದಿಗಳು ಹಾಗೂ ಕೃಷ್ಣ ನಗರದ ಶರೀಫ್ ಮುಲ್ಲಾ, ಬಾಪುಗೌಡ ಚಿನ್ನಗುಡಿ, ಬಸವರಾಜ್ ಸೂರ್ವವಂಶಿ, ರಿತೇಶ್ ಮಲ್ಲಾರಿಯವರ, ಶಂಭಾಜಿ ಕಟವಾಟೆ, ಸಂತೋಷ್ ನರೇಗಲ್, ಸೈಫ್ ಮುಲ್ಲಾ, ರಾಜು ಸಜ್ಜನರ ಸೇರಿದಂತೆ ನಿವಾಸಿಗಳು ಉಪಸ್ಥಿತರಿದ್ದರು.
