ಉದಯವಾಹಿನಿ, ಅಥಣಿ : ತಾಲೂಕಿನ ಐಗಳಿ ಗ್ರಾಮದಲ್ಲಿ ಜರುಗಿದ ಮಹಾ ತಪಸ್ವಿ ಪವಾಡ ಪುರುಷ ಶ್ರೀ ಅಪ್ಪಯ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಂದರ್ಭದಲ್ಲಿ ಜಾತ್ರಾ ಮಹೋತ್ಸವಕ್ಕೆ ಬಂದಿರುವ ಸಕಲ ಭಕ್ತಾದಿಗಳಿಗೆ ಐಗಳಿ ಗ್ರಾಮದ ಮುಸ್ಲಿಂ ಬಾಂಧವರಿಂದ ಬೇಸಿಗೆಯ ಕಡು ಬಿಸಿಲಿನ ಬೇಸಿಗೆಯ ನೀಗಿಸಲು ಅಲ್ಲಲ್ಲಿ ಮಜ್ಜಿಗೆ ಟೇಬಲಗಳನ್ನು ಹಾಕಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ ಮಾಡಿ ಭಾವೈಕ್ಯತೆ ಹಾಗೂ ಸಹೋದರತ್ವದ ಸಂದೇಶವನ್ನು ಸಾರಿದರು.
ಇದೆ ವೇಳೆ ಮಾಚಿ ಶಾಸಕ ಶಹಾಜಹಾನ ಡೊಂಗರಗಾಂವ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಜ್ಜಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ನಾಡು ಒಂದು ಭಾವೈಕ್ಯತೆಯ ನಾಡವಾಗಿದೆ. ನಮ್ಮ ನಾಡಿನಲ್ಲಿ ತಲೆತಲಾಂತರಗಳಿಂದ ಎಲ್ಲ ಸಮುದಾಯದವರು ಭಾವೈಕ್ಯತೆ ಹಾಗೂ ಸಹೋದರತ್ವದ ಭಾವನೆಯಿಂದ ಬದುಕುತ್ತ ಬಂದಿದ್ದಾರೆ ಇನ್ನೂ ಕೂಡ ಗ್ರಾಮೀಣ ಭಾಗದಲ್ಲಿ ಎಲ್ಲ ಸಮಾಜದವರು ಎಲ್ಲ ಹಬ್ಬಗಳನ್ನು ಹಿಂದೂ ಮುಸ್ಲಿಂ ಎಂಬ ಭೇದ ಭಾವ ಇಲ್ಲದೆ ಭಾವೈಕ್ಯತೆ ಯಿಂದ ಎಲ್ಲರೂ ಒಗ್ಗಟಾಗಿ ಹಬ್ಬಗಳನ್ನು ಆಚರಣೆ ಮಾಡುತ್ತ ಬಂದಿದ್ದಾರೆ. ಐಗಳಿ ಗ್ರಾಮದ ಶ್ರೀ ಅಪ್ಪಯ್ಯ ಸ್ವಾಮೀಜಿಯವರ ರಥೋತ್ಸವದ ಅಂಗವಾಗಿ ಮುಸ್ಲಿಂ ಸಮಾಜದ ವತಿಯಿಂದ ಆಯೋಜಿಸಿದ್ದ ಮಜ್ಜಿಗೆ ವಿತರಣೆ ಮಾಡುವದನ್ನ ನೋಡಿದರೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸಾರುತ್ತದೆ ನಿಜವಾಗಲೂ ಇದು ಒಳ್ಳೆಯ ಕಾರ್ಯವಾಗಿದೆ ಎಂದರು. ಈ ವೇಳೆ ಶಿವಯ್ಯ ಸ್ವಾಮಿಜಿ, ಬಸಗೌಡ ಬಿರಾದರ, ನೂರಅಹಮ್ಮದ ಡೊಂಗರಗಾಂವ, ಡಾ. ರವಿ, ಜಗದೀಶ ತೆಲಸಂಗ, ಲಕ್ಷ್ಮಣ ಮುದಗೌಡರ, ಪತ್ರಕರ್ತ ಮಲಗೌಡ ಪಾಟಿಲ್ ಸೇರಿದಂತೆ ಜಾತ್ರಾ ಕಮಿಟಿ ಸದಸ್ಯರು ಹಾಗೂ ಗ್ರಾಸ್ಥರು ಉಪಸ್ಥಿತರಿದ್ದರು.
