ಉದಯವಾಹಿನಿ, ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿಗೆ ಸೇರಿದವರು ಎಂದು ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಿದ್ದಾರೆ.

ನನ್ನ ತಮಿಳು ಸಹೋದರರು ಮತ್ತು ಸಹೋದರಿಯರಿಗೆ ನೋವುಂಟು ಮಾಡುವ ಉದ್ದೇಶದಿಂದ ನಾನು ಆ ಹೇಳಿಕೆ ನೀಡಿಲ್ಲ. ಆದರೂ ನನ್ನ ಹೇಳಿಕೆಗಳು ಕೆಲವರಿಗೆ ನೋವು ತಂದಿದೆ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಶೋಭಾ ಎಕ್ಸ್ ಮಾಡಿದ್ದಾರೆ. ಶಂಕಿತ ಆರೋಪಿ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದಿದ್ದು, ರಾಮೇಶ್ವರಂ ಕೆಫೆ ಸ್ಪೋಟ ಮಾಡಿದ್ದ ಎಂಬ ಮಾಹಿತಿ ಮೇರೆಗೆ ನಾನು ಆ ರೀತಿಯ ಹೇಳಿಕೆ ನೀಡಿದ್ದೇ. ನನ್ನ ಹೇಳಿಕೆಯಿಂದ ತಮಿಳುನಾಡಿನ ಯಾರಿಗಾದರೂ ನೋವುಂಟಾಗಿದ್ದಾರೆ ಅವರಿಗೆ ನನ್ನ ಹೃದಯದ ಆಳದಿಂದ ನಿಮ್ಮ ಕ್ಷಮೆ ಕೇಳುತ್ತೇನೆ ಎಂದು ಅವರು ಪೊಸ್ಟ್ ಮಾಡಿದ್ದಾರೆ. ತಮಿಳಿಗರು ಕರ್ನಾಟಕದ ಸಾಮಾಜಿಕ ರಚನೆಯ ಅವಿಭಾಜ್ಯ ಅಂಗವಾಗಿದ್ದಾರೆ, ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾವು ನಿಕಟ ಸಾಂಸ್ಕøತಿಕ ಬಂಧಗಳನ್ನು ಹೊಂದಿದ್ದೇವೆ ಮತ್ತು ಇತಿಹಾಸವನ್ನು ಹಂಚಿಕೊಂಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!