ಉದಯವಾಹಿನಿ , ತಿ.ನರಸೀಪುರ: ಆಸ್ತಿ ಬರೆದು ಕೊಡಲು ನಿರಾಕರಿಸಿದ ತಂದೆಯನ್ನು ಮಗನೇ ತನ್ನಸ್ನೇಹಿತರೊಡಗೂಡಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುರಸಭೆ ವ್ಯಾಪ್ತಿಯ ಆಲಗೂಡು ಗ್ರಾಮದ ರಾಚಪ್ಪಾಜಿ (60) ಎಂಬುವವರೇ ತನ್ನಪುತ್ರ ಸುಭಾಷ್ ಹಾಗು ಸ್ನೇಹಿತರಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣೆಸಾಟ ನಡೆಸುತ್ತಿರುವ ವ್ಯಕ್ತಿ. ಜೊತೆಗಿದ್ದ ರಾಚಪ್ಪಾಜಿಯ ಸ್ನೇಹಿತ ಮಹದೇವ ಅಲಿಯಾಸ್ ಕೆಂಚ ಸಹ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಹೊರ ವಲಯದಲ್ಲಿರುವ ಮೂಲ ಸ್ಥಾನೇಶ್ವರ ಸ್ವಾಮಿ ದೇವಸ್ಥಾನದ ಮುಂದಿನ ಆವರಣದಲ್ಲಿ ಘಟನೆ ನಡೆದಿದೆ.

ಪ್ರಮುಖ ಆರೋಪಿ ಸುಭಾಷ್ ರೊಂದಿಗೆ ಬೋಗನಮೊಮ್ಮಗ ಅಜಿತ,ಮಣ್ಣಪ್ಪನ ಮೊಮ್ಮಗ ಶಶಿ ಎಂಬುವರ ಮಗ ರಾಜೇಂದ್ರ, ಬೂಕಿ ಮಗ ಮಹೇಶ್, ಕುಳ್ಳಿ ಮಾದ ಎಂಬುವರೇ ಹಲ್ಲೆ ಆರೋಪಿಗಳಾಗಿದ್ದು ಘಟನೆ ಸಂಬಂಧಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತನ್ನ ಮಗನಿಂದಲೇ ತೀವ್ರವಾದ ಇರಿತಕ್ಕೊಳಗಾಗಿರುವ ರಾಚಪ್ಪಾಜಿ ತಮ್ಮಮಕ್ಕಳಿಗೆ ಕೊಡಬೇಕಾದ ಆಸ್ತಿಯನ್ನು ನೀಡಿ ಸಂಸಾರದಿಂದ ಬಿಡುಗಡೆ ಹೊಂದಿದ್ದಾರೆನ್ನಲಾಗಿದ್ದು,ಸುಭಾಷ್ ತನ್ನತಂದೆಯನ್ನು ಮತ್ತೆ ಆಸ್ತಿ ನೀಡುವಂತೆ ಒತ್ತಾಯಿಸಿದ್ದಾನೆ.ಆದರೆ ಮಗನಬೇಡಿಕೆಗೆ ಒಪ್ಪದ ರಾಚಪ್ಪಾಜಿ ನೀಡಬೇಕಾದ ಆಸ್ತಿಯನ್ನು ನೀಡಿ ನಾನು ನಿಮ್ಮಂದ ಬಿಡುಗಡೆ ಹೊಂದಿದ್ದೇನೆ.

Leave a Reply

Your email address will not be published. Required fields are marked *

error: Content is protected !!