ಉದಯವಾಹಿನಿ, ಕೆ.ಆರ್ .ಪುರ: ಕೈವಾರ ತಾತಯ್ಯ ಅವರು ರಚಿಸಿರುವ ಕಾಲಜ್ಞಾನ ಸೂಕ್ತ ರೀತಿಯಲ್ಲಿ ಅಧ್ಯಯನ ನಡೆಸಿದರೆ, ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾರುತಿ ಬಲಿಜ ಸಂಘದ ಕಾರ್ಯದರ್ಶಿ ಶಿವಪ್ಪ ತಿಳಿಸಿದರು.
ಕೆಆರ್ ಪುರದಲ್ಲಿ ಮಾರುತಿ ಬಲಿಜ ಸಂಘದ ವತಿಯಿಂದ ಆಯೋಜಿಸಿದ್ದ ಸದ್ಗುರು ಶ್ರೀ ಯೋಗಿ ನಾರೇಯಣ ಯತೀಂದ್ರರ ೨೯೮ ನೇ ಜಯಂತಿಯ ಅಂಗವಾಗಿ ಪಲ್ಲಕ್ಕಿ ಉತ್ಸವಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕೈವಾರ ತಾತಯ್ಯನವರ ಕಾಲಜ್ಞಾನದ ಮಹತ್ವ ಮತ್ತು ವ್ಯಾಪ್ತಿ ಬಹಳ ಅಗಾದವಾದದ್ದು, ಅವರ ಚರಿತ್ರೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ, ಅವರು ಜಗತ್ತಿನ ಎಲ್ಲಾ ಆಗುಹೋಗುಗಳನ್ನೂ ಬಲ್ಲವರಾಗಿದ್ದರು. ಭವಿಷ್ಯದಲ್ಲಿ ಘಟಿಸಲಿರುವ ಅನಾಹುತ, ಆಗುಹೋಗುಗಳ ಮೊದಲಾದ ಘಟನೆಗಳ ಬಗ್ಗೆ ಕಾಲಜ್ಞಾನ ಮೂಲಕ ಎಚ್ಚರಿಸಿದರು, ನಮಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರ ಕಾಲಜ್ಞಾನದ ಸೂಕ್ತ ಅಧ್ಯಯನವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಾರುತಿ ಬಲಿಜ ಸಂಘದ ಯಲ್ಲಪ್ಪ, ಶಿವಪ್ಪ, ವೇಣು, ಉಮಾಶಂಕರ್, ಮೋಹನ್, ಚಲಪತಿ, ಮಂಜುಳಾದೇವಿ, ಹೇಮಂತ್, ಮಾರ್ಕೆಟ್ ರಮೇಶ್, ಕೃಷ್ಣಪ್ಪ,ಗಜೇಂದ್ರ ಇದ್ದರು.

 

Leave a Reply

Your email address will not be published. Required fields are marked *

error: Content is protected !!