ಉದಯವಾಹಿನಿ, ನವದೆಹಲಿ: ಭಾರತ ಮೂರು ಶಕ್ತಿಶಾಲಿ ಕ್ಷಿಪಣಿ ವ್ಯವಸ್ಥೆಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡಸಿದೆ. ಜುಲೈ 16 ಮತ್ತು 17ರಂದು ತನ್ನ ಮಿಲಿಟರಿ ಸಾಮರ್ಥ್ಯವನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಮೂರು ಪ್ರಮುಖ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಭಾರತ ಲಡಾಖ್‌ನಲ್ಲಿ ಆಧುನಿಕ ಆಕಾಶ್ ಪ್ರೈಮ್ ಕ್ಷಿಪಣಿಯನ್ನು ಪರೀಕ್ಷಿಸಿದೆ. ಒಡಿಶಾದ ಕರಾವಳಿಯಲ್ಲಿ ಪೃಥ್ವಿ 2 ಮತ್ತು ಅಗ್ನಿ 1 ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಆ ಮೂಲಕ ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಜ್ಜಾ ಗಿದೆ ಎಂದು ಮತ್ತೊಮೆ ನಿರೂಪಿಸಿದೆ. ವಿಶೇಷವಾಗಿ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯ ನಂತರ, ಸೇನೆಯ ಈ ಆಕ್ರಮಣಕಾರಿ ನಡೆ ಭಾರತವು ಇನುಂದೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.ಇದೀಗ ಭಾರತದ ಮಿಲಿಟರಿ ಶಕ್ತಿ ಹೊಸ ಮಟ್ಟವನ್ನು ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶವು 3 ಮಾರಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಆ ಮೂಲಕ ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನವನ್ನು ಮಾತ್ರವಲ್ಲ, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ.
ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ ಭಾರತ ತನ್ನ ರಕ್ಷಣಾ ತಂತ್ರಜ್ಞಾನವನ್ನು ಮತ್ತಷ್ಟು ವೇಗಗೊಳಿಸಿದೆ. ಜುಲೈ 16 ಮತ್ತು 17 ರಂದು ಎರಡು ದಿನಗಳಲ್ಲಿ ಭಾರತ ರಕ್ಷಣಾ ಕ್ಷೇತ್ರದಲ್ಲಿ ಮೂರು ಪ್ರಮುಖ ಸಾಧನಗಳನ್ನು ಪರೀಕ್ಷಿಸಿದೆ. ಪ್ರತಿಯೊಂದು ಪರೀಕ್ಷೆಗಳು ಯಶಸ್ವಿಯಾಗಿವೆ ಮತ್ತು ಅವುಗಳನ್ನು ರಕ್ಷಣಾ ಸಚಿವಾಲಯದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ.ಪೃಥ್ವಿ-ಐಐ ಮತ್ತು ಅಗ್ನಿ-ಐ ಕ್ಷಿಪಣಿಗಳನ್ನು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಎರಡೂ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿದ್ದು, ಪರೀಕ್ಷೆಗಳನ್ನು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು.
