ಉದಯವಾಹಿನಿ, ಹೈದರಾಬಾದ್ : ದೇಶೀಯವಾಗಿ ಉತ್ಪಾದಿಸಲಾದ ಮೊದಲ ಸೆಮಿಕಂಡಕ್ಟರ್ ಚಿಪ್ ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕೇಶವ್ ಮೆಮೋರಿಯಲ್ ಎಜುಕೇಷನಲ್ ಸೊಸೈಟಿಯ 85 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತವು ಸೆಮಿ ಕಂಡಕ್ಟರ್ ಉದ್ಯಮದಲ್ಲಿ ಮಹತ್ವದ ಜಾಗತಿಕ ಆಟಗಾರನಾಗಲು ಸಜ್ಜಾಗಿದೆ ಎಂದು ಹೇಳಿದರು. ಹೈದರಾಬಾದ್, ಬೆಂಗಳೂರು, ಪುಣೆ, ಗುರುಗ್ರಾಮ್ ಮತ್ತು ಚೆನ್ನೈ ಸೇರಿದಂತೆ ದೇಶದ ಇತರ ಕೆಲವು ನಗರಗಳಲ್ಲಿ ಅತ್ಯಂತ ಸಂಕೀರ್ಣವಾದ ಕೆಲವು ಚಿಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
ಈಗ, ನಾವು ಸೆಮಿಕಂಡಕ್ಟರ್ ಚಿಪ್‌ ಗಳ ತಯಾರಿಕೆಯನ್ನು ಪ್ರಾರಂಭಿಸುತ್ತಿದ್ದೇವೆ. ನಾವು ಈಗಾಗಲೇ ಆರು ಸೆಮಿಕಂಡಕ್ಟರ್ ಸ್ಥಾವರಗಳನ್ನು ಅನುಮೋದಿಸಿದ್ದೇವೆ. ಅವುಗಳ ನಿರ್ಮಾಣ ನಡೆಯುತ್ತಿದೆ. 2025 ರಲ್ಲಿ ನಾವು ಮೊದಲ ಮೇಡ್ ಇನ್ ಇಂಡಿಯಾ ಚೆಪ್ ಅನ್ನು ಹೊಂದುತ್ತೇವೆ ಎಂದು ಅವರು ಹೇಳಿದರು.
ಭಾರತ ಮಿಷನ್‌ನ ಭಾಗವಾಗಿ, ಉಚಿತ ಡೇಟಾಸೆಟ್ ಗಳು ಮತ್ತು ಇತರವುಗಳನ್ನು ಅಪ್‌ ಲೋಡ್ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಬಳಕೆಯಲ್ಲಿ ಸುಮಾರು ಒಂದು ಮಿಲಿಯನ್ ಜನರಿಗೆ ತರಬೇತಿ ನೀಡಲಾಗುತ್ತಿದೆ.2047 ರ ವೇಳೆಗೆ ಭಾರತವು ವಿಶ್ವದ ಎರಡು ಅಗ್ರ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ವೈಷ್ಣವ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!