ಉದಯವಾಹಿನಿ, ಚಿಕ್ಕಮಗಳೂರು: ಬ್ರೆಡ್‌ಗೆ ಮತ್ತು ಬರೋ ಔಷಧಿ ಬೆರಸಿ ತಿನ್ನಿಸಿ, ದನಗಳನ್ನು ಕದ್ದು ಸಾಗಿಸಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆಸ್ಪತ್ರೆ ಮುಂಭಾಗ ಕಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಳ್ಳರು ಹಸುಗಳಿಗೆ ಬ್ರೆಡ್‌ನಲ್ಲಿ ಮತ್ತು ತರಿಸುವ ವಸ್ತು ಹಾಕಿ ತಿನ್ನಿಸಿದ್ದಾರೆ. ಬಳಿಕ ಅವು ಮಂಕಾದ ಬಳಿಕ ಅವುಗಳನ್ನು ರಿಟ್ಜ್‌ ಕಾರಿನಲ್ಲಿ ತುಂಬಿದ್ದಾರೆ. ಬಳಿಕ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಚಿಕ್ಕಮಗಳೂರಿನ ಭಾಗದಲ್ಲಿ ದನಗಳ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ರಸ್ತೆ ಬದಿ ಮಲಗುವ ಬಿಡಾಡಿ ದನಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿವೆ.ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ರಾತ್ರಿ ವೇಳೆ ಪೊಲೀಸರು ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು ಎಂದು ಆಗ್ರಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!