ಉದಯವಾಹಿನಿ, ದುಬೈ: 2025ರ ಏಷ್ಯಾಕಪ್ ಆರಂಭವಾಗುವ ಸಮಯ ಬಂದಿದೆ. ಏಷ್ಯಾದ ಅಗ್ರ ತಂಡಗಳು ಪ್ರಶಸ್ತಿಗಾಗಿ ಪರಸ್ಪರ ಪೈಪೋಟಿ ನಡೆಸಲಿವೆ. ಮಂಗಳವಾರ(ಸೆ.9) ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ಕಾದಾಟ ನಡೆಸುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯವು ಗುಂಪು ಬಿ ವಿಭಾಗದಲ್ಲಿ ನಡೆಯಲಿದೆ. ಪಂದ್ಯಕ್ಕೆ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ ಅಣಿಯಾಗಿದೆ.

ಹಾಂಗ್ ಕಾಂಗ್ ಏಷ್ಯಾಕಪ್‌ನಲ್ಲಿ ಐದನೇ ಬಾರಿಗೆ ಕಾಣಿಸಿಕೊಳ್ಳುತ್ತಿದೆ. ಆದರೆ ಬಲಾಬಲ ನೋಡುವಾಗ ಅಫಘಾನಿಸ್ತಾನ ಬಲಿಷ್ಠವಾಗಿದೆ. ಇತ್ತೀಚೆಗೆ ನಡೆದಿದ್ದ ಟಿ20 ತ್ರಿಕೋನ ಸರಣಿಯಲ್ಲಿ ಆಫ್ಘಾನ್‌ ತಂಡ ಪಾಕಿಸ್ತಾನಕ್ಕೆ ಸೋಲುಣಿಸಿತ್ತು. ಅಲ್ಲದೆ ಕಳೆದೊಂದು ವರ್ಷದಿಂದ ಆಫ್ಘಾನ್‌ ವಿಶ್ವದ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್‌ ನಂತಹ ತಂಡಗಳಿಗೂ ಸೋಲಿನ ರುಚಿ ತೋರಿಸಿತ್ತು. ಹೀಗಾಗಿ ಆಫ್ಘಾನ್‌ ಬಲಿಷ್ಠ ಎನ್ನಲಡ್ಡಿಯಿಲ್ಲ. ಆದರೂ ಎದುರಾಳಿಯನ್ನು ಹಗುರವಾಗಿ ಕಾಣುವಂತಿಲ್ಲ. ಏಕೆಂದರೆ ಹಾಂಗ್ ಕಾಂಗ್ ಎರಡು ಬಾರಿ ಸೋಲಿನ ರುಚಿ ತೋರಿಸಿದ್ದನ್ನು ಮರೆಯುವಂತಿಲ್ಲ. ಉಭಯ ತಂಡಗಳು ಇದುವರೆಗೆ ಟಿ20ಯಲ್ಲಿ 5 ಬಾರಿ ಮುಖಾಮುಖಿಯಾಗಿದ್ದು, ಆಫ್ಘಾನ್‌ 3, ಹಾಂಗ್ ಕಾಂಗ್ 2 ಗೆಲುವಿನ ದಾಖಲೆ ಹೊಂದಿದೆ. ರಶೀದ್‌ ಖಾನ್‌ ಪಾಳಯದಲ್ಲಿ ಟಿ20 ಟಿ20 ಟಿ20 ಸ್ಪೆಷಲಿಸ್ಟ್‌ಗಳೇ ತುಂಬಿದ್ದಾರೆ. ಅನುಭವಿ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ ಯಾವುದೇ ಕ್ಷಣದಲ್ಲಿಯೂ ತಂಡಕ್ಕೆ ನೆರವಾಗಬಲ್ಲರು. ನಾಯಕ ರಶೀದ್‌ ಖಾನ್‌ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿ ಹೆಸರುವಾಸಿ.

Leave a Reply

Your email address will not be published. Required fields are marked *

error: Content is protected !!