ಉದಯವಾಹಿನಿ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಖಜಾನೆಯಲ್ಲಿ ಭಾರೀ ಮೊತ್ತದ ಹಣ ಏರಿಕೆಯಾಗಿದೆ. 2023-24ರ ಆರ್ಥಿಕ ವರ್ಷದ ವರದಿಯ ಪ್ರಕಾರ ಮಂಡಳಿಯ ಬ್ಯಾಂಕ್ ಬ್ಯಾಲೆನ್ಸ್ 20 ಸಾವಿರ ಕೋಟಿ ರೂ. ದಾಟಿದೆ.
ಕಳೆದ ಐದು ವರ್ಷಗಳಲ್ಲಿ 14627 ಕೋಟಿ ರೂಪಾಯಿ ಉಳಿಕೆ ಹಣವಿತ್ತು. ಅದಕ್ಕೆ ಕಳೆದ ಹಣಕಾಸು ವರ್ಷದಲ್ಲಿ 4193 ಕೋಟಿ ರೂಪಾಯಿ ಸೇರ್ಪಡೆಯಾಗಿದೆ. ಇನ್ನೂ ಬಿಸಿಸಿಐನ ಸಾಮಾನ್ಯ ನಿಧಿ ಸಹ ಹೆಚ್ಚಾಗಿದೆ. 2019ರಲ್ಲಿ 3906 ಕೋಟಿ ರೂ. ಇದ್ದದ್ದು, 2024ರಲ್ಲಿ 7988 ಕೋಟಿ ರೂ. ಏರಿಕೆಯಾಗಿದೆ. ಅಂದರೆ 4082 ಕೋಟಿ ರೂಪಾಯಿ ಹೆಚ್ಚಾಗಿದೆ. ಬಿಸಿಸಿಗೆ ಬಳಿ ಇರುವ ಮೀಸಲು ಹಣಕ್ಕೆ ಸಿಗುವ ಬಡ್ಡಿಯೇ ಸಾವಿರ ಕೋಟಿ ರೂ.ಗೂ ಹೆಚ್ಚಿದೆ. ಇನ್ನೂ 2024-25ರ ಹಣಕಾಸು ವರ್ಷದ ಲೆಕ್ಕಪತ್ರವನ್ನು ಸೆ.28ರಂದು ಮುಂಬೈನಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಈ ವರದಿ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ಆರ್‌ಸಿಬಿ ಗೆದ್ದಿರುವುದರಿಂದ ಬಿಸಿಸಿಐ ಆದಾಯದಲ್ಲೂ ಬಹಳ ಏರಿಕೆಯಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!