ಉದಯವಾಹಿನಿ , ಬಾಗಲಕೋಟೆ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರ ಕತ್ತಲೆ ಭಾಗ್ಯವನ್ನೂ ನೀಡಿದೆ ಎಂದು ಬಾಗಲಕೋಟೆಯ ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಹೌದು ಜನಪ್ರತಿನಿಧಿಗಳು, ವಿಐಪಿ ಗಣ್ಯರಿಗೆ ಅಂತ ಇರುವ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಪ್ರವಾಸಿ ಮಂದಿರ ವಿದ್ಯುತ್ ಇಲ್ಲದೇ ಕತ್ತಲು ಆವರಿಸಿದೆ. ನಿರೀಕ್ಷಣಾ ಮಂದಿರಗಳ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಐಬಿಗಳಿಗೆ ಕತ್ತಲೆ ಭಾಗ್ಯ ಪ್ರಾಪ್ತಿಯಾಗಿದೆ.
ಲೋಕೋಪಯೋಗಿ ಇಲಾಖೆ (PWD) ಹಲವು ತಿಂಗಳಿನಿಂದ ಪ್ರವಾಸಿಮಂದಿರಗಳ ವಿದ್ಯುತ್ ಬಿಲ್ ಪಾವತಿಸಿಲ್ಲ. ಹೀಗಾಗಿ ಬಾಗಲಕೋಟೆ ಪ್ರವಾಸಿಮಂದಿದಲ್ಲಿ ಕರೆಂಟ್ ಇಲ್ಲದಂತಾಗಿ ಬರಿ ಕತ್ತಲು ಆವರಿಸಿದೆ. ಅದರಲ್ಲೂ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರು. ರಾತ್ರಿ ಐಬಿಯಲ್ಲಿದ್ದು ಬೆಳಗ್ಗೆ ಕಾರ್ಯಕ್ರಮ ಮುಗಿಸಿ ಹೊರಡಬೇಕಿತ್ತು. ಆದರೆ ಐಬಿಯಲ್ಲಿ ಕರೆಂಟ್ ಇಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಬೇರೊಬ್ಬರ ಆಪ್ತರ ಮನೆಯಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ತೆರಳಿದ್ದಾರೆ.
