ಉದಯವಾಹಿನಿ: ನವದೆಹಲಿ: ಮುಂದಿನ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಡೀಲ್ ಮಾಡಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಪ್ರಯತ್ನಿಸುತ್ತಿದೆ. ಈ ಬಗ್ಗೆ ರಾಜಸ್ಥಾನ್ ಫ್ರಾಂಚೈಸಿ ಮತ್ತು ಚೆನ್ನೈ ಫ್ರಾಂಚೈಸಿ ನಡುವೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಕರೆಸಿಕೊಳ್ಳಲು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ತ್ಯಾಗ ಮಾಡಲು ಸಿದ್ದ ಎಂದು ತಿಳಿಸಿದ್ದಾರೆ. ಸಿಎಸ್‌ಕೆ ಸಂಜುಗಾಗಿ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಆರ್‌ಆರ್‌ಕೆ ಕಳುಹಿಸಲು ಸಜ್ಜಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಎಂಎಸ್ ಧೋನಿ ನಿವೃತ್ತಿಯ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಂಜು ಸ್ಯಾಮ್ಸನ್ ಅವರನ್ನು ಮಾದರಿ ಆಟ ಎಂದು ನಂಬುತ್ತಿದೆ. ಈ ಕಾರಣದಿಂದಲೇ ಚೆನ್ನೈ ಫ್ರಾಂಚೈಸಿ ಕೇರಳ ಮೂಲಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ ಅನ್ನು ಟ್ರೇಡ್ ಮಾಡಿಕೊಳ್ಳಲು ಆಸಕ್ತಿ ತೋರುತ್ತಿದೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡುವುದು ಎಂಎಸ್ ಧೋನಿಯ ಗುರಿಯಾಗಿದೆ. ಹಾಗಾಗಿ ಕಳೆದ ಹಲವು ವರ್ಷಗಳಲ್ಲಿ ಸಿಎಸ್‌ಕೆಗೆ ಕೀ ಆಟಗಾರನಾಗಿದ್ದ ರವೀಂದ್ರ ಜಡೇಜಾ ಅವರನ್ನು ತ್ಯಾಗ ಮಾಡಲು ಸಿದ್ದರಾಗಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
