ಉದಯವಾಹಿನಿ, ಬೆಂಗಳೂರು: ಪ್ರಪಂಚದಲ್ಲೇ ಎರಡನೇ ಹಾಗೂ ಭಾರತದಲ್ಲೇ ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರವಾಗಿ ಸಿಲಿಕಾನ್ ಸಿಟಿ ಬೆಂಗಳೂರು ಕುಖ್ಯಾತಿ ಪಡೆದಿದೆ. ಈ ಕುರಿತು ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಮಾಹಿತಿ ನೀಡಿದೆ. ಪ್ರಪಂಚದಲ್ಲಿ ಮೆಕ್ಸಿಕೋ ನಂತರ ಎರಡನೇ ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಭಾರತದಲ್ಲಿ ಅತೀ ಹೆಚ್ಚು ಟ್ರಾಫಿಕ್ ಇರುವ ನಗರವಾಗಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ.
ವರದಿಯ ಪ್ರಕಾರ, ಬೆಂಗಳೂರಿನ ಸರಾಸರಿ ದಟ್ಟಣೆ 74.4% ಇತ್ತು, 2024ರಲ್ಲಿ ಇದು 72.7% ಇತ್ತು. ಈ ವರ್ಷ 1.7% ಹೆಚ್ಚಳವಾಗಿದೆ. ದಟ್ಟಣೆಯ ಮಟ್ಟ, ಪ್ರಯಾಣದ ಸಮಯಗಳನ್ನು ಆಧರಿಸಿ ಸರ್ವೇ ನಡೆಯುತ್ತದೆ. ಬೆಳಗ್ಗೆ ಗಂಟೆಗೆ 14.6 ಕಿಮೀ. ವೇಗದಲ್ಲಿ ಚಲಿಸಿದರೆ 10 ಕಿ.ಮಿ ಸಂಚಾರಕ್ಕೆ 41 ನಿಮಿಷ ಬೇಕು. ಸಂಜೆ ಗಂಟೆಗೆ 13.2 ಕಿಮೀ ವೇಗದಲ್ಲಿ ಚಲಿಸಿದರೆ ಇಷ್ಟೇ ದೂರ ಕ್ರಮಿಸಲು 45 ನಿಮಿಷ ಬೇಕು ಎಂದು ತಿಳಿಸಿದೆ.

2025ರ ಪ್ರಕಾರ ಬೆಂಗಳೂರಿನ ಜನ ಅತಿಯಾದ ಟ್ರಾಫಿಕ್‌ನಲ್ಲಿಯೇ 168 ಗಂಟೆ ಕಳೆಯುತ್ತಾರೆ. ಇದು 7 ದಿನ 40 ನಿಮಿಷಗಳಿಗೆ ಸಮನಾಗಿದೆ. 2024ಕ್ಕೆ ಹೋಲಿಸಿದರೆ 12 ಗಂಟೆ 46 ನಿಮಿಷ ಜಾಸ್ತಿಯಾಗಿದೆ. ಇನ್ನೂ ಬೆಂಗಳೂರು ಬಳಿಕ ಟಾಪ್ ಹತ್ತರಲ್ಲಿ ಪುಣೆ ಸ್ಥಾನ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!