ಉದಯವಾಹಿನಿ , ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಸೇನೆಯ ಶಕ್ತಿ ಪ್ರದರ್ಶನಗೊಳ್ಳುತ್ತಿದೆ. ಈ ಆಕರ್ಷಕ ಮೆರವಣಿಗೆಯಲ್ಲಿ ಸೇನೆಯ ಶಕ್ತಿಯುತ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆದಿದೆ. ಜೊತೆಗೆ ಆಪರೇಷನ್ ಸಿಂಧೂರ್ ಟ್ಯಾಬ್ಲೋ ಪ್ರದರ್ಶನ ನಡೆದಿದೆ. ಇದೇ ಮೊದಲ ಬಾರಿಗೆ ಸೇನೆಯ ಡ್ರೋನ್‌ಗಳು ಸಹ ಕಾಣಿಸಿಕೊಂಡಿವೆ.
ಗರುಡಾ ಫಾರ್ಮೆಷನ್‌ನಲ್ಲಿ ಅಪಾಚೆ, ಧ್ರುವ ಹೆಲಿಕಾಪ್ಟರ್, T-90 ಭೀಷ್ಮ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಶಕ್ತಿಬಾನ್ ಮತ್ತು ದಿವ್ಯಾಸ್ತ್ರ, ಧನುಷ್ ಮತ್ತು ಅಮೋಘ್ ಸಿಸ್ಟಮ್, ಸೂರ್ಯಾಸ್ತ್ರ ರಾಕೇಟ್ ಲಾಂಚರ್ , ಬ್ರಮ್ಮೋಸ್ ಸೂಪರ್ ಸಾನಿಕ್ ಮಿಷಲ್ ವೆಪನ್ ಸಿಸ್ಟಮ್, ಆಕಾಶ್ ಮತ್ತು ಅಭರ ಮಧ್ಯಮ ರೇಜ್ ಮಿಸೈಲ್, ಡ್ರೋನ್ ಶಕ್ತಿ ಪ್ರದರ್ಶನ ನಡೆದಿದೆ. ವಂದೇ ಮಾತರಂನ 150 ವರ್ಷಗಳು ಪೂರೈಸಿದ ವಿಷಯ, ದೇಶದ ಅಭಿವೃದ್ಧಿ, ಸಾಂಸ್ಕೃತಿಕ ವೈವಿಧ್ಯತೆಯ ಸ್ತಬ್ಧಚಿತ್ರಗಳ ಪ್ರದರ್ಶನ ಸಹ ನಡೆಯುತ್ತಿದೆ.
