ಉದಯವಾಹಿನಿ , ಅಧ್ಯಕ್ಷ, ವಿಕ್ಟರಿ, ರನ್ನ, ಪೊಗರು, ತೀರ್ಥರೂಪ ತಂದೆಯವರಿಗೆ ಸೇರಿದಂದ ಸಾಕಷ್ಟು ಹಿಟ್ ಸಿನಿಮಾಗಳಿಗೆ ಸಖತ್ತಾಗಿರೋ ಡೈಲಾಗ್ ಬರೆದು ಸೈ ಎನ್ನಿಸಿಕೊಂಡಿದ್ದ ರೈಟರ್ ಪ್ರಶಾಂತ್ ರಾಜಪ್ಪ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್ ರಿವಿಲ್ ಆಗಿದೆ. ಪ್ರಶಾಂತ್ ರಾಜಪ್ಪ ನಿರ್ದೇಶನದ ಮೊದಲ ಸಿನಿಮಾಗೆ `ಅನಂತ ಪದ್ಮನಾಭ’ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ರಿಷಿ ಹಾಗೂ ಪ್ರಕಾಶ್ ಬೆಳವಾಡಿ ಲೀಡ್ ಆಗಿ ಕಾಣಿಸಿಕೊಳ್ತಿದ್ದಾರೆ.
ಈಗಾಗಲೇ ಟೈಟಲ್ ಬಿಡುಗಡೆ ಮಾಡುವ ಮುನ್ನ ವಿಡಿಯೋ ಕಂಟೆಂಟ್ ಬಿಟ್ಟು ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿದ್ದ ಡೈರೆಕ್ಟರ್ ಸದ್ಯ ಡಿಫ್ರೆಂಟ್ ಆಗಿರೋ ಟೈಟಲ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಿಷಿ ನಾಯಕನಾಗಿ ಅಭಿನಯ ಮಾಡ್ತಿರೋ ಅನಂತ ಪದ್ಮನಾಭ ಸಿನಿಮಾದಲ್ಲಿ ಪ್ರಕಾಶ್ ಬೆಳವಾಡಿ ಅವರದ್ದು ವಿಶೇಷ ಪಾತ್ರ ಇನ್ನು ನಾಯಕಿಯಾಗಿ ಅಂಜಲಿ ಅನೀಶ್ ಕಾಣಸಿಕೊಂಡಿದ್ದಾರೆ.ಎರಡು ಜನರೇಷನ್ ಬಗ್ಗೆ ಇರೋ ಈ ಕಥೆಯಲ್ಲಿ ಜೀವನದ ಮೌಲ್ಯಗಳ ಬಗ್ಗೆಯೂ ಹೇಳಿದ್ದಾರಂತೆ ನಿರ್ದೇಶಕರು ಕಾಮಿಡಿ ಡ್ರಾಮ ಇರೋ ಅನಂತ ಪದ್ಮನಾಭ ಸಿನಿಮಾವನ್ನ ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರೋ ಸಿನಿಮಾ ತಂಡ ಇನ್ನು ಎರಡು ಹಾಡುಗಳ ಚಿತ್ರೀಕರಣವನ್ನ ಬಾಕಿ ಉಳಿಸಿಕೊಂಡಿದೆ.
