ಉದಯವಾಹಿನಿ , ಜೋಡಿ ಹಕ್ಕಿಗಳಾಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26 ರಂದು ಜೈಪುರದಲ್ಲಿ ನಡೆಯಲಿದೆ. ಈ ಮದುವೆಗೆ ಬೆಂಗಳೂರಿನಿಂದ ಹೂ ಪೂರೈಸಲಾಗುತ್ತದೆ. ಭಾರತ ಮತ್ತು ವಿಶ್ವದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮಗಳಿಗೆ ಬೆಂಗಳೂರಿನಿಂದ ಹೂಗಳನ್ನು ಕಳುಹಿಸಲಾಗುತ್ತದೆ. ಅದರಲ್ಲೂ ಫೆಬ್ರವರಿಯಲ್ಲಿ ಹೂಗಳಿಗೆ ಬಹಳ ಬೇಡಿಕೆಯಿದೆ. ಈಗ ತಾರಾ ಜೋಡಿಯ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಮದುವೆ ಮನೆಯಲ್ಲಿ ಬೆಂಗಳೂರಿನ ಹೂಗಳು ನಳನಳಿಸಲಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಶ್ರೀಕಾಂತ್ ಬೊಳ್ಳೆಪಲ್ಲಿ, ಭಾರತದಲ್ಲಿ ಎಲ್ಲಿಯಾದರೂ ನಡೆಯುವ ಮದುವೆಗಳಲ್ಲಿ ಕತ್ತರಿಸಿದ ಹೂವುಗಳನ್ನು ಬೆಂಗಳೂರಿನಿಂದ ಕಳುಹಿಸಲಾಗುತ್ತದೆ. ಅದೇ ರೀತಿ ಈ ವರ್ಷ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹಕ್ಕೆ ಕರ್ನಾಟಕದಿಂದ ಹೂವುಗಳನ್ನು ಕಳುಹಿಸಲಾಗುವುದು ಎಂದು ಹೇಳಿದರು. ಕರ್ನಾಟಕದ ಭಾರತದ ಅತಿದೊಡ್ಡ ಪುಷ್ಪಕೃಷಿ ಕೇಂದ್ರವಾಗಿದ್ದು ಜನವರಿ ಮತ್ತು ಫೆಬ್ರವರಿ ನಡುವಿನ ಕೇವಲ 45 ದಿನಗಳಲ್ಲಿ ಸುಮಾರು 1,000 ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರನ್ನು ಮದುವೆಯ ವದಂತಿಗಳ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದರು. ಅಕ್ಟೋಬರ್ 3, 2025 ರಂದು ವಿಜಯ್ ದೇವರಕೊಂಡ ಅವರ ಹೈದರಾಬಾದ್ ಮನೆಯಲ್ಲಿ ಜೋಡಿಯ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರ ಪ್ರೀತಿಪಾತ್ರರು, ಕುಟುಂಬದವರು ಮಾತ್ರ ಭಾಗಿಯಾಗಿದ್ದರು.
