ಉದಯವಾಹಿನಿ : ತೂಕ ಇಳಿಸಿಕೊಳ್ಳೋರು, ಫಿಟ್‌ನೆಸ್ ಬಗ್ಗೆ ಯೋಚಿಸುವವರು ಮೊದಲು ಆಯ್ಕೆಮಾಡೋ ಡಿಶ್ ಯಾವುದು ಅಂದ್ರೆ Caesar Salad. ಹೆಸರೇ ಕೇಳಿದ್ರೆ ರೋಮನ್ ಸಾಮ್ರಾಜ್ಯದ Caesar ನೆನಪಾಗುತ್ತಾನೆ. ಆದರೆ ಈ ಸಲಾಡ್‌ಗೂ ಜೂಲಿಯಸ್ ಸೀಸರ್‌ಗೂ ಯಾವುದೇ ಸಂಬಂಧ ಇಲ್ಲ. ಅಚ್ಚರಿಯ ಸಂಗತಿ ಅಂದ್ರೆ, ಈ ಪ್ರಸಿದ್ಧ ಸಲಾಡ್ ಹುಟ್ಟಿದ್ದು ಅರಮನೆಯಲ್ಲೂ ಅಲ್ಲ, ಐಷಾರಾಮಿ ಹೋಟೆಲ್‌ನಲ್ಲೂ ಅಲ್ಲ.
1924ರಲ್ಲಿ ಮೆಕ್ಸಿಕೋ ದೇಶದ ಟಿಜುವಾನಾ ನಗರದಲ್ಲಿ ಈ ಕಥೆ ಆರಂಭವಾಗುತ್ತದೆ. ಅಮೆರಿಕದಲ್ಲಿ ನಿಷೇಧ ಕಾನೂನು ಇದ್ದ ಸಮಯದಲ್ಲಿ ಜನರು ವೀಕೆಂಡ್ ಮೋಜಿಗಾಗಿ ಗಡಿ ದಾಟಿ ಟಿಜುವಾನಾಗೆ ಬರುತ್ತಿದ್ದರು. ಅಲ್ಲಿ ಅನ್ನೋ ಇಟಾಲಿಯನ್ ಮೂಲದ ಶೆಫ್ ಒಂದು ಚಿಕ್ಕ ರೆಸ್ಟೋರೆಂಟ್ ನಡೆಸುತ್ತಿದ್ದರು.
ಒಂದು ಬ್ಯುಸಿ ದಿನ, ಅತಿಥಿಗಳ ಸಂಖ್ಯೆ ಜಾಸ್ತಿ ಆಗಿ, ಅಡುಗೆ ಸಾಮಗ್ರಿಗಳು ಕಡಿಮೆಯಾಗುತ್ತವೆ. ಆಗ ಕೈಗೆ ಸಿಕ್ಕದ್ದನ್ನೇ ಬಳಸಿ, ಲೆಟ್ಯೂಸ್ ಎಲೆಗಳು, ಬ್ರೆಡ್ ಕೌಟಾನ್ಸ್, ಆಲಿವ್ ಆಯಿಲ್, ಲೆಮನ್ ರಸ, ಮೊಟ್ಟೆ ಮತ್ತು ಚೀಸ್ ಸೇರಿಸಿ ಅವರು ಹೊಸದೊಂದು ಸಲಾಡ್ ತಯಾರಿಸಿದರು. ಆ ದಿನದ ಅಚ್ಚರಿ ಪ್ರಯೋಗವೇ ನಂತರ “Caesar Salad” ಅಂತ ಪ್ರಸಿದ್ಧಿ ಪಡೆಯಿತು. ಮೊದಲಿನ ರೆಸಿಪಿಯಲ್ಲಿ ಚಿಕನ್ ಕೂಡ ಇರಲಿಲ್ಲ ಅನ್ನೋದು ಇನ್ನೊಂದು ಇಂಟರೆಸ್ಟಿಂಗ್ ಫ್ಯಾಕ್ಟ್. ಇಂದು ತೂಕ ಇಳಿಕೆಗೆ ಸಹಾಯಕ ಅನ್ನೋ ಕಾರಣಕ್ಕೆ ಈ ಸಲಾಡ್ ಜಾಗತಿಕ ಮೆನುಗಳಲ್ಲಿ ಸ್ಥಾನ ಪಡೆದಿದೆ. ಸರಳತೆಯಿಂದ ಹುಟ್ಟಿದ ಡಿಶ್ ಒಂದು ವಿಶ್ವಪ್ರಸಿದ್ಧವಾಗಬಹುದು ಅನ್ನೋದಕ್ಕೆ Caesar Salad ಅತ್ಯುತ್ತಮ ಉದಾಹರಣೆ.
