
ಉದಯವಾಹಿನಿ,ಸಿಂಧನೂರು: ತಾಲ್ಲೂಕಿನ ಸೋಮಲಾಪುರ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಬರುವ ಭೂಮಿಯಲ್ಲಿ ಕ್ಯಾಂಪಿನ 92 ಬಡ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಹತ್ತು ಪತ್ರಗಳನ್ನು ವಿತರಿಸಬೇಕು ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ವತಿಯಿಂದ ಒತ್ತಾಯಿಸಿದರು,
ನಂತರ ಮಾತನಾಡಿದ ತಾಲ್ಲೂಕು ಅಧ್ಯಕ್ಷರಾದ ರಮೇಶ್ ಪಾಟೀಲ್ ಬೇರ್ಗಿ ಅವರ ಪಶುಈಗಾಗಲೇ ಕಳೆದ ಎರಡು (02) ದಿನಗಳಿಂದ ಸರ್ವ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಸೋಮಲಾಪುರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗಳು ಇವರು ಸರ್ವ ನಂ: 44 ಹಾಗೂ ಸರ್ವೆ ನಂ: 67 ಸರಕಾರಿ ಭೂಮಿಯನ್ನು ಸರ್ವೆ ಮಾಡಿ ತಮಗೆ ವರದಿ ಒಪ್ಪಿಸಿದ್ದಾರೆಂದು ಗೊತ್ತಾಗಿದೆ ಎಂದು ಹೇಳಿದರು.
ಈ ನಿವೇಶನ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನೇರವಾಗಿ ನಿವೇಶನ ಹಂಚಿಕೆ ಮಾಡಲು ಮಾಜ್ಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಹೇಳಿದರು. ಮತ್ತು ತಾವು ತೀವ್ರ ಗತಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ 92 ಜನ ಬಡ ಕುಟುಂಬ ನಿವೇಶನ ರಹಿತ ಕುಟುಂಬಗಳ ಪಟ್ಟಿಯನ್ನು ಕಳುಹಿಸಬೇಕೆಂದು ಒತ್ತಾಯಿ ಮಾಡಿದರು.
ಇದು ಅಲ್ಲದೆ ಇದುವರೆಗೆ ಅಕ್ರಮ ಸಾಗುವಳಿ ಮಾಡಿದ ಗಂಗಾಧರ ಇವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಇದುವರೆಗೆ ಆ ಜಮೀನಿನಲ್ಲ ಬೆಳೆದ ಭತ್ತಕ್ಕೆ ಬೆಲೆ ನಿಗದಿ ಮಾಡಿ ದಂಡ ವಸೂಲ ಮಾಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ಬಿ ಎನ್ ಯರಿದಿಹಾಳ ತಾಲ್ಲೂಕು ಉಪಾಧ್ಯಕ್ಷರಾದ ಚಿಟ್ಟಿ ಬಾಬು ಹೋರಾಟ ಮಹಿಳೆಯರು ಹೋರಾಟಗಾರರ ಹಾಗೂ ಪೋಲೀಸ್ ಇಲಾಖೆ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
