
ಉದಯವಾಹಿನಿ,ತಿರುಪತಿ: ಟಿ.ಟಿ.ಡಿ.ಶ್ರೀ ತಿರುಮಲ ತಿರುಪತಿ ದೇವಸ್ಥಾನ ಬ್ರಹ್ಮರಥೋತ್ಸವ ಶುಭಾ ಸಮಾರಂಭದ ಕುರಿತು ಪೂರ್ವಬಾವಿ ಸಭೆ ಏರ್ಪಡಿಸಲಾಗಿತ್ತು. ಟಿ.ಟಿ.ಡಿ.ಅಧ್ಯಕ್ಷರಾದ ಕರುಣಾಕರ್ ರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಎ.ವಿ.ಧರ್ಮರೆಡ್ಡಿ ಮತ್ತು ಕೆ.ಸಿ.ರೆಡ್ಡಿ ವೇಲ್ ಫೇರ್ ಆಸೋಸಿಯೇಷನ್ ಅಧ್ಯಕ್ಷೆ ಶ್ರೀಮತಿ ವಸಂತ ಕವಿತರವರು, ಎಸ್.ವಿ.ಬಿ.ಸಿ ನಿರ್ದೇಶಕ ಆನಂತ್ ರವರು ಟಿ.ಟಿ.ಡಿ.ಕಾರ್ಯನಿರ್ವಹಣೆ ಮಾಡುವವರಿಗೆ ಟೀ ಶಾರ್ಟ್ ಮತ್ತು ಲೋ ಗೋ ಲೋಕರ್ಪಣೆ ಮಾಡಿದರು.ತಿರುಮಲ ತಿರುಪತಿ ದೇವಸ್ಥಾನದಲ್ಲಿ ಸೆಪ್ಟಂಬರ್, ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಬ್ರಹ್ಮರಥೋತ್ಸವ ಆಯೋಜಿಸಲಾಗುತ್ತದೆ.ಕರ್ನಾಟಕದಿಂದ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ ಅವರಿಗೆ ವಸತಿ, ದರ್ಶನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು ಮತ್ತು ವಿಐಪಿ ದರ್ಶನ ಕಡಿಮೆ ಮಾಡಿ ಸಾರ್ವಜನಿಕರ ದರ್ಶನ ಹೆಚ್ಚಿಗೆ ಮಾಡಬೇಕು.ಕರ್ನಾಟಕ ಮಹಾಜನತೆಗೆ ಸಿಹಿ ಸುದ್ದಿ ಟಿ.ಟಿ.ಡಿ.ವತಿಯಿಂದ ಕನ್ನಡ ಭಾಷೆಯಲ್ಲಿ ಟಿ.ವಿ.ಯಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಬ್ರಹ್ಮರಥೋತ್ಸವ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ತಿರುಮಲ ತಿರುಪತಿ ಆಗಮಿಸುವ ಭಕ್ತರು ಆನ್ ಲೈನ್ ಬುಕ್ಕಿಂಗ್ ಮಾಡಿಕೊಂಡು ತಿರುಪತಿ ವೆಂಕಟೇಶ್ವರ ದರ್ಶನ ಮಾಡಬೇಕು ಎಂದು ಶ್ರೀಮತಿ ವಸಂತ ಕವಿತಾ ಮನವಿ ಮಾಡಿದರು .

