ಉದಯವಾಹಿನಿ ಸಿರುಗುಪ್ಪ : ತಾಲ್ಲೂಕಿನ ಸಿರಿಗೇರಿ ಗ್ರಾಮದ ದಾರುಕ ನಗರದಲ್ಲಿ ಪಿಒಪಿ ಗಣಪತಿ ಬಳಸದೆ ಪರಿಸರ ಸ್ನೇಹ ಮಣ್ಣಿನ ಗಣೇಶ ಪೂಜಿಸಲು ಮನೆ ಮನೆಗೆ ಮಣ್ಣಿನ ಗಣೇಶ ವಿತರಿಸಿ ಪರಿಸರ ಜಾಗೃತಿ ಮೂಡಿಸಿದ ಎಸ್ ಎಂ ಸಹನಾ.ಗಣೇಶ ಚತುರ್ಥಿ ನಾಡಿನ ಮೊದಲ ಪೂಜೆ ಸಲ್ಲಿಸುವ ಗಣಪನ ಆರಾಧ್ಯ ಹಬ್ಬವಾಗಿರುವುದರಿಂದ ಸಿರಿಗೇರಿ ಗ್ರಾಮದ ಪಿಯುಸಿ ವಿದ್ಯಾರ್ಥಿ ಎಸ್ ಎಂ ಸಹನಾ ಪ್ರತಿ ವರ್ಷ ವಿಭೂತಿ ಗಣೇಶ, ಗಂಧದ ಗಣೇಶ, ಹರಿಶಿನ ಗಣೇಶ, ತಯಾರಿಸಿ ಈ ವರ್ಷವೂ ಸಹ ವಿಶೇಷ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ಭಕ್ತಿಯಿಂದ ಪೂಜಿಸಿ ತಯಾರಿಸಿ ತಾನು ಪೂಜಿಸುವುದಲ್ಲದೆ ಓಣಿಯ ಎಲ್ಲಾ ಮನೆಮನೆಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಉಚಿತವಾಗಿ ವಿತರಿಸಿ ರಾಸಾಯನಿಕ ಬೆರತ ಉತ್ಪನ್ನದಿಂದ ಗಣಪತಿ ಮೂರ್ತಿಯನ್ನು ಪೂಜಿಸಿ ನೀರಿನಲ್ಲಿ ಬಿಡಬೇಡಿ ಇದರಿಂದ ಪರಿಸರ ಹಾನಿಗೊಳ್ಳುವುದಲ್ಲದೆ ನೀರು ಮಲಿನವಾಗುತ್ತದೆ. ಆದ್ದರಿಂದ ಸರ್ಕಾರದ ಆದೇಶ ನೀಡಿದಂತೆ ಪಿಓಪಿ ಗಣಪತಿಯನ್ನು ಪೂಜಿಸಬೇಡಿ ಇಂತಹ ಮಣ್ಣಿನ ಗಣಪತಿಗೆ ಹೆಚ್ಚಿನ ಆದ್ಯತೆ ನೀಡಿ ಪೂಜಿಸಿ ನೀರಿನಲ್ಲಿ ವಿಸರ್ಜಿಸಬೇಕು ಇದು ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಓಣಿಯ ಎಲ್ಲಾ ಮಹಿಳೆಯರಿಗೆ ಭಕ್ತಿಯಿಂದ ಮಣ್ಣಿನ ಗಣಪನ ಮೂರ್ತಿ ನೀಡಿ ಪರಿಸರ ಜಾಗೃತಿ ಮೂಡಿಸಿದಳು.
ಧಾರಕ ನಗರದಲ್ಲಿರುವ ಓಣಿಯ ಶ್ರೀಮತಿ ಅಕ್ಕ ಮಹಾದೇವಿ, ಸಿಸ್ಟರ್ ಈರಮ್ಮ, ಪಾರ್ವತಮ್ಮ, ಗಂಗಮ್ಮ, ಹಂಪಮ್ಮ, ಸುನಂದ, ವಡ್ಡರ ಈರಮ್ಮ, ಅರುಣ, ಸರ್ವಮಂಗಳಮ್ಮ, ಇವರುಗಳಿಗೆ ಭಕ್ತಿಯಿಂದ ಉಚಿತವಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ನೀಡಿ ಪರಿಸರ ಜಾಗೃತಿ ಮೂಡಿಸಲು ತಿಳಿಸಿದಳು. ಪರಿಸರ ಜಾಗೃತಿ ಮೂಡಿಸಿದ ಎಸ್ ಎಂ ಸಹನಾ.ಗಣೇಶ ಚತುರ್ಥಿ ನಾಡಿನ ಮೊದಲ ಪೂಜೆ ಸಲ್ಲಿಸುವ ಗಣಪನ ಆರಾಧ್ಯ ಹಬ್ಬವಾಗಿರುವುದರಿಂದ ಸಿರಿಗೇರಿ ಗ್ರಾಮದ ಪಿಯುಸಿ ವಿದ್ಯಾರ್ಥಿ ಎಸ್ ಎಂ ಸಹನಾ ಪ್ರತಿ ವರ್ಷ ವಿಭೂತಿ ಗಣೇಶ, ಗಂಧದ ಗಣೇಶ, ಹರಿಶಿನ ಗಣೇಶ, ತಯಾರಿಸಿ ಈ ವರ್ಷವೂ ಸಹ ವಿಶೇಷ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ಭಕ್ತಿಯಿಂದ ಪೂಜಿಸಿ ತಯಾರಿಸಿ ತಾನು ಪೂಜಿಸುವುದಲ್ಲದೆ ಓಣಿಯ ಎಲ್ಲಾ ಮನೆಮನೆಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಉಚಿತವಾಗಿ ವಿತರಿಸಿ ರಾಸಾಯನಿಕ ಬೆರತ ಉತ್ಪನ್ನದಿಂದ ಗಣಪತಿ ಮೂರ್ತಿಯನ್ನು ಪೂಜಿಸಿ ನೀರಿನಲ್ಲಿ ಬಿಡಬೇಡಿ ಇದರಿಂದ ಪರಿಸರ ಹಾನಿಗೊಳ್ಳುವುದಲ್ಲದೆ ನೀರು ಮಲಿನವಾಗುತ್ತದೆ. ಆದ್ದರಿಂದ ಸರ್ಕಾರದ ಆದೇಶ ನೀಡಿದಂತೆ ಪಿಓಪಿ ಗಣಪತಿಯನ್ನು ಪೂಜಿಸಬೇಡಿ ಇಂತಹ ಮಣ್ಣಿನ ಗಣಪತಿಗೆ ಹೆಚ್ಚಿನ ಆದ್ಯತೆ ನೀಡಿ ಪೂಜಿಸಿ ನೀರಿನಲ್ಲಿ ವಿಸರ್ಜಿಸಬೇಕು ಇದು ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಓಣಿಯ ಎಲ್ಲಾ ಮಹಿಳೆಯರಿಗೆ ಭಕ್ತಿಯಿಂದ ಮಣ್ಣಿನ ಗಣಪನ ಮೂರ್ತಿ ನೀಡಿ ಪರಿಸರ ಜಾಗೃತಿ ಮೂಡಿಸಿದಳು. ಧಾರಕ ನಗರದಲ್ಲಿರುವ ಓಣಿಯ ಶ್ರೀಮತಿ ಅಕ್ಕ ಮಹಾದೇವಿ, ಸಿಸ್ಟರ್ ಈರಮ್ಮ, ಪಾರ್ವತಮ್ಮ, ಗಂಗಮ್ಮ, ಹಂಪಮ್ಮ, ಸುನಂದ, ವಡ್ಡರ ಈರಮ್ಮ, ಅರುಣ, ಸರ್ವಮಂಗಳಮ್ಮ, ಇವರುಗಳಿಗೆ ಭಕ್ತಿಯಿಂದ ಉಚಿತವಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ನೀಡಿ ಪರಿಸರ ಜಾಗೃತಿ ಮೂಡಿಸಲು ತಿಳಿಸಿದಳು.
