ಉದಯವಾಹಿನಿ, ಸಾಮಾನ್ಯವಾಗಿ ನಾವೆಲ್ಲಾ ಲೆಮನ್ ರೈಸ್ , ಜೀರಾ ರೈಸ್, ಫ್ರೈಡ್ ರೈಸ್ ಮತ್ತು ಮಸಾಲಾ ರೈಸ್ ಬಗ್ಗೆ ತುಂಬಾನೇ ಕೇಳಿರುತ್ತೇವೆ ಮತ್ತು ಅನೇಕ ಬಾರಿ ಅವುಗಳ ರುಚಿ ಸಹ ನೋಡಿರುತ್ತೇವೆ. ಆದರೆ ಬಟರ್ ರೈಸ್ ಅಥವಾ ಗೋಲ್ಡನ್ ಬಟರ್ ರೈಸ್ ಬಗ್ಗೆ ನಮ್ಮಲ್ಲಿ ಅನೇಕರು ಕೇಳಿರಲಿಕ್ಕಿಲ್ಲ ನೋಡಿ. ಹೌದು.. ಬಟರ್ ರೈಸಿನಲ್ಲಿ ಬರೀ ಬಟರ್ ಮತ್ತು ಮಸಾಲೆ ಪದಾರ್ಥಗಳು ಒಟ್ಟಿಗೆ ಹಾಕಿದ್ದರೆ, ಗೋಲ್ಡನ್ ಬಟರ್ ರೈಸಿನಲ್ಲಿ ಶುಂಠಿ ಮತ್ತು ಅರಿಶಿನವನ್ನು ಸೇರಿಸಲಾಗಿರುತ್ತದೆ. ಈ ಎರಡು ಮಸಾಲೆ ಪದಾರ್ಥಗಳು ಬಟರ್ ರೈಸಿಗೆ ಒಂದೊಳ್ಳೆಯ ಸುವಾಸನೆ ಮತ್ತು ಸ್ವಾದಿಷ್ಟಕರವಾದ ರುಚಿಯನ್ನು ನೀಡುತ್ತದೆ.
ನಾವೆಲ್ಲಾ ಲೆಮನ್ ರೈಸ್ , ಜೀರಾ ರೈಸ್, ಫ್ರೈಡ್ ರೈಸ್ ಮತ್ತು ಮಸಾಲಾ ರೈಸ್ ಬಗ್ಗೆ ತುಂಬಾನೇ ಕೇಳಿರುತ್ತೇವೆ ಮತ್ತು ಅನೇಕ ಬಾರಿ ಅವುಗಳ ರುಚಿ ಸಹ ನೋಡಿರುತ್ತೇವೆ. ಆದರೆ ಬಟರ್ ರೈಸ್ ಅಥವಾ ಗೋಲ್ಡನ್ ಬಟರ್ ರೈಸ್ ಬಗ್ಗೆ ನಮ್ಮಲ್ಲಿ ಅನೇಕರು ಕೇಳಿರಲಿಕ್ಕಿಲ್ಲ ನೋಡಿ. ಹೌದು.. ಬಟರ್ ರೈಸಿನಲ್ಲಿ ಬರೀ ಬಟರ್ ಮತ್ತು ಮಸಾಲೆ ಪದಾರ್ಥಗಳು ಒಟ್ಟಿಗೆ ಹಾಕಿದ್ದರೆ, ಗೋಲ್ಡನ್ ಬಟರ್ ರೈಸಿನಲ್ಲಿ ಶುಂಠಿ ಮತ್ತು ಅರಿಶಿನವನ್ನು ಸೇರಿಸಲಾಗಿರುತ್ತದೆ. ಈ ಎರಡು ಮಸಾಲೆ ಪದಾರ್ಥಗಳು ಬಟರ್ ರೈಸಿಗೆ ಒಂದೊಳ್ಳೆಯ ಸುವಾಸನೆ ಮತ್ತು ಸ್ವಾದಿಷ್ಟಕರವಾದ ರುಚಿಯನ್ನು ನೀಡುತ್ತದೆ.
ಈ ಗೋಲ್ಡನ್ ಬಟರ್ ರೈಸ್ ಮತ್ತು ಬಟರ್ ರೈಸ್ ಎರಡೂ ರೈಸ್ ಐಟಂಗಳು ಬೇರೆ ಬೇರೆಯಾಗಿವೆ. ಗೋಲ್ಡನ್ ಬಟರ್ ರೈಸ್ ಬರೀ ಬೆಣ್ಣೆಯನ್ನು ಮಾತ್ರವೇ ಬೆರೆಸಿ ಬೇಯಿಸಿದ ಅನ್ನದ ರೆಸಿಪಿಯಾಗಿರುವುದಿಲ್ಲ. ಇದು ನಿಜವಾಗಿಯೂ ಬೆಣ್ಣೆಯಲ್ಲಿ ಬೇಯಿಸಿದ ಅನ್ನವಾಗಿರುತ್ತದೆ. ಇದು ಅನೇಕರಿಗೆ ಇಷ್ಟವಾಗುವ ರೈಸ್ ಐಟಂ ಆಗಿದ್ದು, ಗೋಲ್ಡನ್ ಮಿಲ್ಕ್ ಎಂಬ ಕ್ಲಾಸಿಕ್ ಭಾರತೀಯ ಪಾನೀಯದಿಂದ ಸ್ಫೂರ್ತಿ ಪಡೆದ ಮಸಾಲೆಗಳನ್ನು ಇದು ಹೊಂದಿರುತ್ತದೆ. ಈ ಗೋಲ್ಡನ್ ಬಟರ್ ರೈಸ್ ಮಾಡೋದಕ್ಕೆ ಒಟ್ಟು 35 ನಿಮಿಷಗಳು ಬೇಕಾಗುತ್ತವೆ. ಐದು ನಿಮಿಷಗಳು ಎಲ್ಲಾ ಪದಾರ್ಥಗಳನ್ನು ಸೇರಿಸಿಕೊಳ್ಳಲು ಹಿಡಿಯುವ ಸಮಯವಾಗಿರುತ್ತದೆ. ಅಡುಗೆ ಮಾಡಲು 20 ನಿಮಿಷಗಳು ಮತ್ತು ಮಾಡಿದ ಅಡುಗೆಯನ್ನು ೧೦ ನಿಮಿಷಗಳ ಕಾಲ ಹಾಗೆಯೇ ಬಿಡಬೇಕಾಗುತ್ತದೆ.
