
ಉದಯವಾಹಿನಿ, ಚಿಕ್ಕಮಗಳೂರು: ಮಗನ ಎದುರಲ್ಲೇ ಮಲಗಿದ್ದ ದಂಪತಿಯನ್ನು ಕೊಚ್ಚಿ ಕೊಲೆಗೈದ ಅಪರಾಧಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಗೋವಿಂದಪ್ಪ ಎಂಬಾತ ಎನ್.ಆರ್.ಪುರದ ಕುಸುಬೂರಿನಲ್ಲಿ 2019ರಲ್ಲಿ ದಂಪತಿಯನ್ನು 8 ವರ್ಷದ ಮಗನ ಎದುರೇ ಕೊಲೆಗೈದಿದ್ದ. ಕೊಲೆ ಬಳಿಕ ಮಚ್ಚನ್ನು ತೆಂಗಿನಮರದ ಸುಳಿಯಲ್ಲಿಟ್ಟಿದ್ದ. ಅಕ್ರಮ ಸಂಬಂಧ ಹಿನ್ನೆಲೆ ಕೊಲೆ ನಡೆದಿತ್ತು. ಎನ್.ಆರ್‌ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಮನೆಗೆ ನುಗ್ಗಿದ್ದಕ್ಕೆ 1 ವರ್ಷ ಜೈಲು, ಕೊಲೆಗೆ ಗಲ್ಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ತೀರ್ಪು ವಿಧಿಸಿದೆ. ಆರೋಪಿ ವಿರುದ್ಧ ಸರ್ಕಾರಿ ಅಭಿಯೋಜಕಿ ಪಿ.ವೀಣಾ ವಾದ ಮಂಡಿಸಿದ್ದರು.
