ಉದಯವಾಹಿನಿ,ತಾಳಿಕೋಟಿ:  ತಾಲೂಕಿನ ಹರನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ವತಿಯಿಂದ ಪತ್ರಕರ್ತರಾದ ಅಬ್ದುಲ್ ಗನಿ  ಮಕಾನದಾರ ಸಂಜಯ್ ಸಿಂಗ್ ರಜಪೂತ  ಹಾಗೂ ಸುನೀಲ ಅಂಬಿಗೇರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚಿಗೆ ಹರನಾಳ ಗ್ರಾಮದಲ್ಲಿ ಜರುಗಿದ ಸಂಘದ 2022 -23ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಉದಯವಾಹಿನಿ ದಿನಪತ್ರಿಕೆ ತಾಲೂಕ ವರದಿಗಾರ ಅಬ್ದುಲ್ ಗನಿ ಮಕಾನದಾರ್ ಲೋಕ ದರ್ಶನ ವರದಿಗಾರ ಸಂಜಯ ಸಿಂಗ್ ರಜಪೂತ ಕನ್ನಡಮ್ಮ ಹಾಗೂ ಗುಮ್ಮಟನಗರಿ ವರದಿಗಾರ ಸುನೀಲ ಅಂಬಿಗೇರ ಇವರನ್ನು ಗ್ರಾಮೀಣ ಭಾಗದ ಜ್ವಲಂತ ಸಮಸ್ಯೆಗಳನ್ನು ತಮ್ಮ ವರದಿಗಳ ಮೂಲಕ ಪರಿಹರಿಸುವಲ್ಲಿ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಸನ್ಮಾನವನ್ನು ನೀಡಿ ಗೌರವಿಸಲಾಗಿದೆ. ಈ ಸಮಯದಲ್ಲಿ ಸಂಘದ ಅಧ್ಯಕ್ಷ ಎಸ್. ಹೆಚ್ ಬಿರಾದಾರ್ ಉಪಾಧ್ಯಕ್ಷ ಡಿಕೆ ಘತ್ತರಗಿ ನಿರ್ದೇಶಕರಾದ ಎಂ ಎನ್ ನಡಕೂರ್ ಬಿ ಎನ್ ಗುಡ್ನಾಳ. ಎಸ್ ಹೆಚ್ ಪೂಜಾರಿ. ಸಾಹೇಬ್ ಪಟೇಲ ಮೊಕಾಶಿ. ಬಿ. ಎನ್. ಬಿರಾದಾರ. ಗಣ್ಯರಾದ ಸಂಗಪ್ಪ ಶಳಗಿ. ಶಿವಯ್ಯ ಹಿರೇಮಠ. ಯಮನಪ್ಪ ಅಂಬಳನೂರ. ಗುರಣ್ಣ ಗಬಸಾವಳಗಿ. ನಾಗೇಶ್ ನಡ್ಕೂರ್. ಗಂಗಾಧರ್ ಬಿರಾದರ್. ಕೆ.ಡಿ. ಅಂಗಡಿ ದೇವಪ್ಪ ಗುಡುಗುಂಟಿ ಇದ್ದರು

Leave a Reply

Your email address will not be published. Required fields are marked *

error: Content is protected !!