ಉದಯವಾಹಿನಿ, ಔರಾದ್ : ವಡಗಾಂವ(ದೇ)ದಲ್ಲಿ ಯಾದಗೀರಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಖಾಜಾ ಖಲಿಲುಲ್ಲಾ ಅವರ ನೇತೃತ್ವದಲ್ಲಿ ಸಹಾರಾ ಯೂಥ್ ಗಣೇಶ ಮಂಡಳಿ ವತಿಯಿಂದ ೨೦೧೨ರಿಂದ ಇಲ್ಲಿಯವರೆಗೆ ಸತತವಾಗಿ ಜನಪರ ಕಾರ್ಯಕ್ರಮಗಳು ಜರುಗುತ್ತಿವೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಸಂತಪುರ ಪೊಲೀಸ್ ಠಾಣೆಯ ಪಿಎಸ್ ಐ ಮಹಬೂಬ್ ಅಲಿ ಹೇಳಿದರು. ತಾಲೂಕಿನ ವಡಗಾಂವ(ದೇ) ದೇಶಮುಖ ಗಡಿಯಲ್ಲಿ ಸಹಾರಾ ಯೂಥ್ ಗಣೇಶ ಮಂಡಳಿ ವತಿಯಿಂದ ಜರುಗಿದ ಸಾಧಕರಿಗೆ ಸನ್ಮಾನ ಹಾಗು ರಸಮಂಜರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೇಲ್ಮೇಟ್ ಜಾಗೃತಿ ನೀಡಿ ಮಾತನಾಡಿದ ಅವರು, ವಾಹನ ಸವಾರರು ರಸ್ತೆಯ ಮೇಲೆ ವಾಹನ ಸಂಚಾರಕ್ಕೆ ಬರಬೇಕಾದರೇ ವಾಹನದ ಎಲ್ಲ ದಾಖಲೆಗಳು ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಕಡ್ಡಾಯವಾಗಿ ಹೇಲ್ಮೇಟ್ ಧರಿಸಬೇಕು. ದ್ವಿಚಕ್ರವಾಹನದಲ್ಲಿ ಕೇವಲ ಇಬ್ಬರೇ ಮಾತ್ರ ಸಂಚಾರ ಮಾಡಿ , ರಸ್ತೆ ಸಂಚಾರದ ನಿಯಮಗಳನ್ನು ಪಾಲಿಸಬೇಕು. ಹೇಲ್ಮೇಟ್ ಧರಿಸದೇ ಇರುವುದರಿಂದ ದಿನಾಲು ಹಲವಾರು ಅಪಘಾತಗಳು ಜರುಗುತ್ತಿದ್ದು, ಅನೇಕ ಕುಟುಂಬಗಳಲ್ಲಿ ಮನೆಯ ಯಜಮಾನರನ್ನೇ ಕಳೆದುಕೊಂಡು ಪರಿವಾರಗಳು ಸಂಕಷ್ಟಕ್ಕೆ ಸಿಲುಕುವ ಉದಾಹರಣೆಗಳು ಜರುಗುತ್ತಿವೆ. ವಾಹನ ಸವಾರರು ಯಮ ನಿಮ್ಮನ್ನು ಕರೆದುಕೊಂಡು ಹೋಗಲು ಬರುವ ಮುನ್ನ ಮುನ್ನಚ್ಚರಿಕೆವಾಗಿ ಹೇಲ್ಮೇಟ್ ಧರಿಸಿ ಪ್ರಾಣಾಪಾಯದಿಂದ ಪಾರಾಗುವಂತೆ ತಿಳಿಸಿದರು. ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಮಾತನಾಡಿ, ಸತತವಾಗಿ ೧೧ ವರ್ಷಗಳಿಂದ ಗ್ರಾಮದ ಎಲ್ಲ ಸಮಾಜಮುಖಿ ಮನಸ್ಸುಗಳ ಮುಖಾಂತರ ಪ್ರತಿವರ್ಷ ಗಣೇಶೋತ್ಸವದಲ್ಲಿ ಗ್ರಾಮದಲ್ಲಿ ಅವಿರತ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗು ಅವರಿಗೆ ಪ್ರೇರಣೆ ನೀಡುವ ಜನಪರ ಕಾರ್ಯ ಗಣೇಶ ಮಂಡಳಿ ವತಿಯಿಂದ ಎಲ್ಲರ ಸಹಕಾರದಲ್ಲಿ ಜರುಗುತ್ತಿದೆ. ಇದಕ್ಕೆ ಎಲ್ಲರು ಕೈಜೋಡಿಸುತ್ತಿರುವುದು ಗ್ರಾಮಾಭಿವೃದ್ಧಿಗೆ ಸಹಕಾರಿಯಾಗಿದೆ.ಪಿಡಿಒ ಸುಭಾಷ ಭುಯ್ಯಾ, ಪಶು ವೈಧ್ಯಾಧಿಕಾರಿ ಡಾ. ಸೂರ್ಯಕಾಂತ ಬಿರಾದರ್ ಮಾತನಾಡಿದರು.ಇದೇ ವೇಳೆ ಇಸ್ರೋದಲ್ಲಿ (ಚಂದ್ರಯಾನ ೩) ರಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮದ ಪ್ರಭುಗೊಂಡಾ, ಸುಧಾಕರ್, ಎಂಬಿ ಬಿಎಸ್ ಅರ್ಹತೆ ಪಡೆದಿರುವ ಖದೀರ್ ಸೇರಿದಂತೆ ಇನ್ನಿತರ ಸಾಧನೆ ಮಾಡಿದ ೧೦೦ ಕ್ಕೂ ಹೆಚ್ಚು ಸಾಧಕರಿಗೆ ಗಣೇಶ ಮಂಡಳಿ ವತಿಯಿಂದ ಶಾಲು ಸನ್ಮಾನ ಜರುಗಿತು. ನಂತರ ಮುದ್ದೆಬಿಹಾಳ ಅದ್ವಿಕಾ ಮೇಲೋಡಿಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಪಂ ಅಧ್ಯಕ್ಷ ರಾಜು ಹೇಡೆ, ಉಪಾಧ್ಯಕ್ಷೆ ಪದ್ಮಾವತಿ ಖಾನಪೂರ, ಪಿಡಿಒ ಸುಭಾಷ ಭುಯ್ಯ, ಪತ್ರಕರ್ತ ಮಲ್ಲಪ್ಪ ಗೌಡಾ, ಪಶು ವೈಧ್ಯಾಧಿಕಾರಿ ಡಾ. ಸೂರ್ಯಕಾಂತ ಬಿರಾದರ್ , ಮಲ್ಲಿಕಾರ್ಜುನ ಕೇಸರಿ, ಮಹೇಶ, ಸೂರ್ಯಕಾಂತ ದೇಶಮುಖ, ಹಣಮಂತ ನೇಳಗೆ, ಓಂಕಾರ್, ಭಜನಲಾಲ್ , ಸಿದ್ದಯ್ಯ ಸ್ವಾಮಿ, ಸೇರಿದಂತೆ ಇತರರಿದ್ದರು.ರತಿಕಾಂತ ನೇಳಗೆ ವಂದಿಸಿದರು. ನವೀಲಕುಮಾರ್ ಉತ್ಕಾರ್ ಸ್ವಾಗತಿಸಿದರು. ಬಸವ ಚಿಕನಿಂಗೆ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!