
ಉದಯವಾಹಿನಿ ಇಂಡಿ :ವಿದ್ಯೆ ಎಂಬುದು ಸಾಧಕರಿಗೆ ಮಾತ್ರ ಒಲಿಯುವಂತಹದು. ಶ್ರದ್ಧೆ ಮತ್ತು ನಿರಂತರ ಪರಿಶ್ರಮದಿಂದ ಶಿಕ್ಷಣ ಪಡೆದವರಿಗೆ ಎಲ್ಲವನ್ನು ತನ್ನದಾಗಿಸಿ ಕೊಳ್ಳುವ ಶಕ್ತಿ ಬರುತ್ತದೆ. ಸ್ವಂತ ಸಾಮಥ್ಯವನ್ನು ಅರಿತು ಗುರಿ ಸಾಧನೆಯತ್ತ ಮುಖ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದ ಸಭಾಭವನದಲ್ಲಿ ಶ್ರೀ ಭಗೀರಥ ಸಮಾಜ ಸೇವಾ ಸಂಘ ಸಂಯುಕ್ತಾಶ್ರಯದಲ್ಲಿ ಜರುಗಿದ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಭಗೀರಥ ಸಮುದಾಯ ವಿಧ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು. ಶಿಕ್ಷಣ ಪಡೆದರೆ ಉಪ್ಪಾರ ಸಮಾಜ ಸುಧಾರಣೆಯಾಗುತ್ತದೆ. ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಪ್ರಮುಖ. ದುಶ್ಚಟಗಳಿಗೆ ದಾಸರಾಗದೆ ಇತರರಿಗೆ ಮಾದರಿಯಾಗಿ ಬದುಕು ನಡೆಸಬೇಕು ಎಂದರು. ಸಾನಿಧ್ಯ ವಹಿಸಿರುವ ಪುರುಷೋತ್ತಮಾನಂದಪುರಿ ಸ್ವಾಮಿಜಿಯವರು ಮಾತನಾಡಿ ಒಗ್ಗಟಿನಲ್ಲಿ ಬಲವಿದೆ. ಮೂಢನಂಬಿಕೆ, ಕಂದಾಚಾರದಿಂದ ಸಮಾಜ ಬಾಂಧವರು ಹೊರಬರಬೇಕು. ಅಂದಾಗ ಶೈಕ್ಷಣಿಕ ಪ್ರಗತಿ, ಸಮಾಜ ಸುಧಾರಣೆ ಸಾಧ್ಯ ಎಂದರು. ಸಮಾಜದ ತಾಲೂಕಾ ಅಧ್ಯಕ್ಷ ಸುರೇಶ ಕರಾಂಡೆ, ತಮ್ಮಣ್ಣ ಪೂಜಾರಿ ಮಾತನಾಡಿದರು. ಇದೇ ವೇಳೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಇಂಡಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸನ್ಮಾನಿಸಿದರು. ವೇದಿಕೆಯ ಮೇಲೆ ಜಟ್ಟೆಪ್ಪ ಹತ್ತಿ , ಮಳಸಿದ್ದ ಬ್ಯಾಳಿ ಭೀಮರಾಯ ಉಪ್ಪಾರ್, ಸಂಜು ಮೊಟ್ಟಾಗಿ ಶ್ರೀಶೈಲ್ ಮಾದರಿ ಶ್ರೀಶೈಲ್ ಶಿವಣ್ಣ , ಸೋಮಶೇಖರ್ ಸೊನ್ನ ಅನಿಲ್, ಸೋಮಶೇಖರ್ ಬ್ಯಾಳಿ ನಿಂಗೂ ಬಿರಾದಾರ, ಸಂತೋಷ ಕಟ್ಟಿ, ಪರಶುರಾಮ ಕಸ್ಕಿ , ಜಕ್ಕಪ್ಪ ಉಪ್ಪಾರ್, ವಿಠ್ಠಲ್ ಸೊನ್ನ ಜಟ್ಟೆಪ್ಪ ನೆರಳೆ,ಮಾಳಪ್ಪ ದಳವಾಯಿ ಮತ್ತಿತರಿದ್ದರು.
