ಉದಯವಾಹಿನಿ ಕೆಂಭಾವಿ : ಪ್ರೊಫೆಸರ್ ಬಿ ಕೃಷ್ಣಪ್ಪನವರು ಸ್ಥಾಪಿತವಾದ DSS ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ  ಅವರ ಆದೇಶದ ಮೇರೆಗೆ  ಹಾಗೂ ಜಿಲ್ಲಾ ಸಂಚಾಲಕರಾದ ನಿಂಗಣ್ಣ ಗೋನಾಲ್ ಅವರ  ಸಮ್ಮುಖದಲ್ಲಿ  ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಎಲ್ಲ ಯುವಕರು ಜಾಗೃತರಾಗಿ  ಶಿಕ್ಷಣವಂತರಾಗಬೇಕು, ಮೂಢನಂಬಿಕೆಯನ್ನು ತೆಗೆದು ಹಾಕಬೇಕು  ಅಂಬೇಡ್ಕರ್ ಮತ್ತು ಪ್ರೊಫೆಸರ್ ಬಿ ಕೃಷ್ಣಪ್ಪನವರ ಹಾದಿಯಲ್ಲಿ ನಡೆಯಬೇಕೆಂದು  ಎಲ್ಲಾ ಪದಾಧಿಕಾರಿಗಳಿಗೆ ನಿಂಗಣ್ಣ ಗೋನಲ್  ಅವರು  ಹೇಳಿದರು.ಯುವಕರು ಸಂಘಟನೆಯನ್ನು ಬಲಪಡಿಸುವಂತೆ ಆಗಬೇಕು ಮತ್ತು ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು,ಎಂದು ಎಚ್ ಆರ್ ಬಡಿಗೇರ್ ಅವರು ಹೇಳಿದರು ,ಇದೇ ಸಂಧರ್ಭದಲ್ಲಿ  ಕೆಂಭಾವಿ  ಹೋಬಳಿ  ಘಟಕದ ಸಂಚಾಲಕರಾಗಿ ಸಾಯಬಣ್ಣ ಎಂಟಮನ್ ನಗರ ಘಟಕ ಸಂಚಾಲಕರಾಗಿ  ಪರಮಣ್ಣ ವಠಾರ, ಹಾಗೂ ಯಾಳಗಿ ಗ್ರಾಮ ಘಟಕ ಸಂಚಲಕರಾಗಿ  ಅಯ್ಯಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ  ನಾಗರಾಜ್ ಓಕೂಳಿ, ನಿಂಗಪ್ಪ ಯಾಕ್ತಾಪುರ,  ಹಣಮಂತ ಅಮಾಪುರ, ಧರ್ಮಣ್ಣ ಚಿಂಚೋಳಿ, ಬಸ್ಸು ಶಹಾಪುರ, ಮಲ್ಲು ವಜ್ಜಲ್, ಚಂದ್ರು ಕಕ್ಕೇರಿ, ನಾಗರಾಜ್ ಗೋಗಿಕೇರ್, ಭೀಮಣ್ಣ ಕರಡಕಲ್, ದೇವು, ಕುಮಾರ್, ವಿಠಲ್, ಮೌನೇಶ್ ನಿರೂಪಿಸಿದರು, ಸದಾಶಿವ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!