
ಉದಯವಾಹಿನಿ ಮಾಲೂರು:- ತಾಲೂಕಿನಲ್ಲಿ ಕೊರಚ- ಕೊರಮ ಸಮುದಾಯ ಭವನ ನಿರ್ಮಾಣಕ್ಕೆ ಮಾನ್ಯ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.ಅಖಿಲ ಕರ್ನಾಟಕ ಕೊರಚ ಕೊರಮ ಮಹಾಸಭಾ ರಾಜ್ಯಾಧ್ಯಕ್ಷ ಮತ್ತು ಸಂಸ್ಥಾಪಕ ಸಂಪತ್ ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿ ಶ್ರೀಧರ್ ವತಿಯಿಂದ ಮಾಲೂರು ತಾಲ್ಲೂಕು ತಹಸೀಲ್ದಾರರಿಗೆ ಸಮುದಾಯ ಭವನಕೆ ಮನವಿಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಯಾದವ ಸಮುದಾಯದ ಮುಖಂಡ ನಾಗೇಂದ್ರ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಕಸ್ತೂರಿ ಶ್ರೀನಿವಾಸ ಉಪಸ್ಥಿತರಿದ್ದರು.
