
ಉದಯವಾಹಿನಿ ದೇವದುರ್ಗ: ಸಮೀಪದ ಊಟಿ ಮಾರ್ಗವಾಗಿ ವಂದಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಎಲ್ಲೆಂದರಲ್ಲಿ ಕಿತ್ತಿ ಹೋಗಿದೆ. ತೆಗ್ಗುದಿನ್ನಿಗಳ ಮಧ್ಯೆಯೇ ಸಂಚಾರ ಮಾಡುವಂತಿದೆ. ಈರಸ್ತೆ ಮಾರ್ಗವಾಗಿ ಸಂಚಾರಿಸುವಂತ ಬೈಕ್ ಸವಾರರ ಜೀವ ಹಿಂಡಿದೆ. ಆರೇಳು ವರ್ಷಗಳಿಂದೆ ಪ್ರಧಾನಿ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆ ಹಿನ್ನೆಲೆ ಇದೀಗ ರಸ್ತೆ ಹಾಳಾಗಿದೆ. ಬಿದ್ದಿರುವ ಗುಂಡಿಗಳಿಗೆ ತಾತ್ಕಾಲಿಕ ಮರಂ ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಹಿಂದೇಟು ಹಾಕಲಾಗಿದೆ. ಇಲ್ಲಿನ ರಸ್ತೆ ಸಮಸ್ಯೆ ಕುರಿತು ಸ್ಥಳೀಯರು ಶಾಸಕರ ಗಮನಕ್ಕೆ ತರಲಾಗಿದೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಕ್ರಿಯೆಯೋಜನೆ ರೂಪಿಸುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷಗಳಿಂದ ಈರಸ್ತೆ ಮಾರ್ಗವಾಗಿ ಚಲ್ಲಿಸುವಂತ ಬೈಕ್ ಸವಾರರು ಎದ್ದುಬಿದ್ದು ಸಂಚಾರ ಮಾಡುವಂತಿದೆ. ಇನ್ನು ರಾತ್ರಿವತ್ತಂತೂ ಬೈಕ್ ಸವಾರರು ನಿಧನವಾಗಿ ಚಲ್ಲಿಸಬೇಕಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಕೋಟ್ಯಾಂತರ ರೂ. ಅನುದಾನ ವ್ಯಯಿಸುತ್ತಿದೆ. ಆದರೀಗ ನಿರ್ವಹಣೆ ಕೊರತೆ ಹಿನ್ನೆಲೆ ಎಲ್ಲೆಂದರಲ್ಲಿ ರಸ್ತೆಗಳ ಮಧ್ಯೆ ಗುಂಡಿಗಳು ಬಿದ್ದಿದ್ದರಿಂದ ಸುಗಮ ಸಂಚಾರಕ್ಕೆ ಅಡಚರಣೆ ಉಂಟಾಗುತ್ತಿದೆ. ಮಳೆ ಬಂದಾಗಂತೂ ರಸ್ತೆ ಯಾವುದೂ ಗುಂಡಿ ಯಾವುದೂ ಎಂಬಂತಾಗಿದೆ. ಈಮಾರ್ಗದ ರಸ್ತೆಗಳು ಒಂದು ಗುಂಡಿ ತಪ್ಪಿಸಲು ಮೊತ್ತೊಂದು ಗುಂಡಿಗೆ ಎದ್ದುಬಿದ್ದು ಸಂಚಾರ ಮಾಡುತ್ತಿದ್ದರಿಂದ ಬೈಕ್‍ಗಳು ದುರಸ್ತಿಗೆ ಬರುತ್ತಿವೆ ಎಂದು ಊಟ ಗ್ರಾಮಸ್ಥ ಅನ್ವರಪಾಷ್ ಆರೋಪಿಸಿದರು.
ಊಟ ಗ್ರಾಮದ ಮಾರ್ಗವಾಗಿ ವಂದಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಕ್ಕಪಕ್ಕಕ್ಕೆ ಜಾಲಿಗಂಟಿಗಳು ಬೆಳೆದು ರಸ್ತೆಗೆ ಬಾಗಿವೆ. ಒಂದೊಮ್ಮೆ ವಾಹನಗಳು ಬಂದಾಗ ಬೈಕ್ ಸವಾರರು ಸಮಸ್ಯೆ ಎದುರಿಸುವಂತಿದೆ. ಸಂಬಂಧಪಟ್ಟಂತ ಇಲಾಖೆಯ ಅಧಿಕಾರಿಗಳು ಬೆಳೆದು ನಿಂತಿರುವಂತ ಜಾಲಿಗಂಟಿಗಳು ಜಂಗಲ್ ಕಟ್ಟಿಂಗ್ ಮಾಡಿಲ್ಲ. ಮೊದಲೇ ಕಿರಿದಾದ ರಸ್ತೆ ಇದ್ದು, ಅದರಲ್ಲಿ ಜಾಲಿಗಂಟಿಗಳು ರಸ್ತೆ ಬಾಗಿದ್ದು, ಸುಗಮ ಸಂಚಾರಕ್ಕೆ ಬಹಳ ತೊಂದರೆ ಉಂಟಾಗಿದೆ.
ಹದಗೆಟ್ಟಿರುವ ರಸ್ತೆಯಿಂದ ಆಗುತ್ತಿರುವಂತ ಹಲವು ಸಮಸ್ಯೆಗಳ ಕುರಿತು ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದಾರೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಿಗೆ ಕ್ರಿಯಯೋಜನೆ ರೂಪಿಸಲು ಶಾಸಕಿ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಪ್ಯಾಕೇಜ್‍ನಲ್ಲಿ ಜಂಗಲ್ ಕಟ್ಟಿಂಗ್ ಮಾಡಲು ಪೂರ್ವ ಸಿದ್ದತೆ ನಡೆದಿದೆ. ಟೆಂಡರ್ ಪ್ರಕ್ರಿಯೆ ಮೂಲಕ ಜಾಲಿಗಂಟಿಗಳು ಸ್ವಚ್ಚತೆಗೆ ಕ್ರಮವಹಿಸಲಾಗುತ್ತಿದೆ. ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.
ಊಟ ಮಾರ್ಗವಾಗಿ ವಂದಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಕ್ರಿಯೆಯೋಜನೆ ಮಾಡಲಾಗುತ್ತಿದೆ. ಬೆಳೆದು ನಿಂತಿರುವಂತ ಜಾಲಿಗಂಟಿಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುತ್ತದೆ. ಪ್ಯಾಕೇಜ್ ಟೆಂಡರ್ ಕರೆದು ಸ್ವಚ್ಛತೆಗೆ ಅದತ್ಯ ನೀಡಲಾಗುತ್ತದೆ: ಬಕ್ಕಪ್ಪ ಹೊಸಮನಿ ಪಿಡಬ್ಲ್ಯೂಡಿ ಎಇಇ
