ಉದಯವಾಹಿನಿ ಇಂಡಿ : ಪಟಣದ ತಾಲೂಕಿನಾದ್ಯಂತ ಹದಗೆಟ್ಟ ರಸ್ತೆ ಸುಧಾರಣೆ ಮಾಡುವ ಕುರಿತು   ತಹಶೀಲ್ದಾರ ಇಂಡಿ ಇವರಿಗೆ  ಮನವಿ ಇಂಡಿ ತಾಲೂಕಿನಾದ್ಯಂತ ಜಯ ಕರ್ನಾಟಕ ಸಂಘಟನೆ ಇಂಡಿ ಘಟಕದಿಂದ ಮತ್ತು ಇಂಡಿ ತಾಲೂಕಿನ ಜನಸಾಮಾನ್ಯರ ವತಿಯಿಂದ ಈ ಮೂಲಕ  ತಮ್ಮ ಗಮನಕ್ಕೆ ತರುವುದೇನೆಂದರೆ- ಇಂಡಿ ತಾಲೂಕಿನಾದ್ಯಂತ ಪ್ರತಿಹಳ್ಳಿಗಳಿಗೆ ಹೋಗುವ ಮುಖ್ಯ ರಸ್ತೆಗಳು ಹದಗೆಟ್ಟು ಹೋಗಿರುವದರಿಂದ, ದಿನನಿತ್ಯ ಹಳ್ಳಿಗಳಿಂದ ಇಂಡಿ ತಾಲೂಕಿನವರೆಗೆ ಸಂಚರಿಸುವ ಪ್ರತಿನಿತ್ಯ ತಾಲೂಕಿನ ಒಂದಿಲ್ಲಾ ಒಂದು ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ಪ್ರಾಣಕ್ಕೆ ಹಾನಿ ಉಂಟಾಗುತ್ತಿವೆ. ಆದ್ದರಿಂದ ಸರಕಾರ ಇದರ ಬಗ್ಗೆ ಗಂಭೀರವಾಗಿ ಗಮನಹರಿಸಿ ರಸ್ತೆ ಸುಧಾರಣೆ ಮಾಡಬೇಕು.ಈಗಿನ ಸರಕಾರ ಕೇವಲ ಗ್ಯಾರಂಟಿ ಯೋಜನೆಗಳನ್ನಷ್ಟೇ ಕೊಟ್ಟರೆ ಜನಸಾಮಾನ್ಯರ ಸಮಸ್ಯೆಗಳನ್ನೆಲ್ಲಾ ಬಗೆಹರಿದಿದೆ ಅಂತಾ ತಿಳಿದು ಸಾಮಾನ್ಯ ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾದ ರಸ್ತೆ ಸುಧಾರಣೆ ಕಡೆ ಗಮನ ಹರಿಸುತ್ತಿಲ್ಲ. ದಯವಿಟ್ಟು ಸರಕಾರ ಈ ನಮ್ಮ ಮನವಿಗೆ ಸ್ಪಂದಿಸಿ ಇಂಡಿ ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳ ಸುಧಾರಣೆ ಮಾಡಿಕೊಟ್ಟು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಪ್ರತಿಯೊಬ್ಬ ಬಡವರ ಪ್ರಾಣ ರಕ್ಷಣೆಗೆ ಮುಂದಾಗಬೇಕು. ಈ ಹದಗೆಟ್ಟ ರಸ್ತೆಗಳ ಸಮಸ್ಯೆ ನಿವಾರಣೆಯಾಗಬೇಕು ಅಂದಾಗ ಮಾತ್ರ ಇಂಡಿ ತಾಲೂಕು ಸಮೃದ್ಧ ತಾಲೂಕಾಗಿ ಬೆಳೆಯಬಹುದು, ಇಲ್ಲವಾದಲ್ಲಿ ರೈತರ ಹಾಗೂ ಬಡ ಜನರ ಜೀವನ ಜೊತೆ ಚೆಲ್ಲಾಟವಾಡುವ ಆಡಳಿತವಾಗಿ ಉಳಿಯುತ್ತದೆ. ಆದ್ದರಿಂದ ತಾಲೂಕಾ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಈ ಸಮಸ್ಯೆ ಬಗೆಹರಿಸಬೇಕು ಒಂದು ವೇಳೆ ಈ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಧರಣಿ ಸತ್ಯಾಗ್ರ ಮಾಡಲಾಗುವದು ಎಂದು ಜಯ ಕರ್ನಾಟಕ ಸಂಘ ಈ ಮೂಲಕ ಸರಕಾರಕ್ಕೆ ಆಗ್ರಹಿಸುತ್ತದೆ. ಈ ಸಂದರ್ಭದಲ್ಲಿ. ಜಿಲ್ಲಾ ಅಧ್ಯಕ್ಷ ಮಹೇಶ ನಾಯಕ.ಜಿಲ್ಲಾ ಉಪಾಧ್ಯಕ್ಷರ ಪಿಂಟು ಗಬ್ಬುರ.ಜಿಲ್ಲಾ ಸಂಘಟನಾ ಕಾರ್ಯದರ್ಶಿ. ರಿಯಾಜ ಪಾಂಡು.
ಇಂಡಿ ತಾಲೂಕಾ ಅಧ್ಯಕ್ಷ ಇಸ್ಮಾಯಿಲ್ ಕುಣಬಿ. ಮಹಮ್ಮದಯಾಸಿನ ಶೇಖ ನಗರ ಅಧ್ಯಕ್ಷ. ದೇಸು ಚವ್ಹಾಣ ಪ್ರದಾನ ಕಾರ್ಯದರ್ಶಿ ಇಂಡಿ. ನಫೀಸಾ ಶೇಖ ಮಹಿಳಾ ತಾಲೂಕಾ ಅಧ್ಯಕ್ಷ. ಕವೀತಾ ಅಳ್ಳೊಳಿ ಜಿಲ್ಲಾ ಉಪಾಧ್ಯಕ್ಷ. ಸವೀತಾ ಅಡವಿ.ನೀಲಾoಬಿಕಾ ಬಿರಾದಾರ್.ಬೇಬಿ ತಳವಾರ್.ಸೈನಜಾ ಮುಲ್ಲಾ. ಬುಡ್ದು ಸರಫ್.ಮಾದು ನಾವಿ.ಮುಸ್ತಾಕ್ ಪಾಂಡು.ಚಾಂದಸಾಬ್ ಪಾಂಡು.ಸಿರಾಜ್ ಕಾರಬರಿ.ಇಸ್ಮಾಯಿಲ್ ಮುಲ್ಲಾ.ರೂಕ್ಸನ್ ಮಂಕದಾರ.ಸಾಹಿನ ಬಡೇಪರ್.ಖಾಜಾಮ್ ಭಗವಾನ್. ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!