
ಉದಯವಾಹಿನಿ ಗದಗ: ನಮೋ ಬ್ರಿಗೇಡ್ ವತಿಯಿಂದ ಜನಗಣಮನ ಬೆಳೆಸೋಣ ಕಾರ್ಯಕ್ರಮ ಹಿನ್ನೆಲೆ ಅ. 11 ರಂದು ಬೈಕ್ ರ್ಯಾಲಿ ನಡೆಯಲಿದೆ ಎಂದು ನಮೋ ಬ್ರಿಗೇಡ್ ಕಾರ್ಯಕರ್ತ ಶರಣು ಅಂಗಡಿ ಹೇಳಿದರು. ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 10 ವರ್ಷಗಳ ಕೇಂದ್ರ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಉದ್ದೇಶವಾಗಿದೆ. ಔಷಧಿ ಮಾಫಿಯಾ, ಕೋಟಾನೋಟು ಮಾಫಿಯಾ ಸೇರಿ ಕೇಂದ್ರ ಸರ್ಕಾರವನ್ನು ಸೋಲಿಸುವ ಹುನ್ನಾರ ನಡೆಸಿದೆ. ಈ ಎಲ್ಲ ದುಷ್ಟ ಶಕ್ತಿಗಳಿಂದ ಭಾರತೀಯರ ರಕ್ಷಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ಈ ಬೈಕ್ ರ್ಯಾಲಿ ನಡೆಯಲಿದೆ ಎಂದರು. ಲಕ್ಕುಂಡಿಯಿಂದ ಬೈಕ್ ರ್ಯಾಲಿ ಆರಂಭಗೊಳ್ಳುತ್ತದೆ. ಹಾತಲಗೇರಿ ಗ್ರಾಮ, ಬೆಟಗೇರಿ, ಗಾಂಧಿವೃತ್ತ ಸೇರಿದಂತೆ ವಿವಿಧ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಮುಳಗುಂದ ನಾಕಾ ಮೂಲಕ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಲುಪಲಿದೆ. ಈಗಾಗಲೇ ಸೆ.28 ರಿಂದ ಕೋಲಾರದಲ್ಲಿ ನಮೋ ಬ್ರಿಗೇಡ್ ಬೈಕ್ ರ್ಯಾಲಿ ಆರಂಭವಾಗಿದೆ ಎಂದು ಶರಣು ಅಂಗಡಿ ತಿಳಿಸಿದರು ಈ ಸಂದರ್ಭದಲ್ಲಿ ವಿಜಯಕುಮಾರ್ ನಂದಿಕೋಲಮಠ, ಸಂಜಯ್ ರೆಡ್ಡಿ, ಕಿಶನ್ ಮೆರವಾಡೆ, ಮುತ್ತಣ್ಣ ನವಲಗುಂದ ಇತರರು ಇದ್ದರು,
