ಉದಯವಾಹಿನಿ, ಬೀದರ್ : ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರಶಾಂತ ಎಂಪಳ್ಳಿ ಅವರಿಗೆ ಬೀದರ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿಯ ಗ್ರಾಮದ ,ಡಾ. ಪ್ರಶಾಂತ ಭೀಮರಾವ ಎಂಪಳ್ಳಿ ಅವರು ಮಂಡಿಸಿದ “ಆಗಮೆಂಟೇಷನ್ ಆಫ್ ಪೆÇೀಸ್ಟಪಾರ್ಟುಮ್ ಫೇರ್ಟಿಲಿಟಿ ಬೈ ಸಪ್ಲೈಮೆಂಟಿಂಗ್ ಮೇಜ್ ಅಂಡ್ ಸಾಫ್ಲವರ್ ಆಯಿಲ್ ವಿಥ್ ಸಿಆಯ್ಡಿಆರ್ ಇನ್ಸರ್ಟ್ ಇನ್ ಬಿದ್ರಿ ಗೋಟ್ಸ್ ಎಂಬ ಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ.ಡಾ. ಪ್ರಶಾಂತ ಎಂಪಳ್ಳಿಗೆ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್.ಜಿ ಬಿಜೂರಕರ ಅವರು ಮಾರ್ಗದರ್ಶನ ನೀಡಿದರು. ಸೋಮವಾರ ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ 13ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಥಾವರಚಂದ ಗೆಹ್ಲೋಟ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇವರ ಸಾಧನೆಗೆ ವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!