
ಉದಯವಾಹಿನಿ ಇಂಡಿ : ತಾಲ್ಲೂಕಿನ ಮಿನಿ ವಿಧಾನಸೌಧ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಂತ ತಾಲೂಕ ದಂಡಾಧಿಕಾರಿಗಳಾದ ಕಡಕಭಾವಿ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳಾದ ಬಿ ಜೆ ಇಂಡಿ ಇವರು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಶಾಲಾ ಕಾಲೇಜು ಗಳಲ್ಲಿ ಆಚರಣೆ ಮಾಡಲು ನಿರ್ಧರ್ಶನ ಮಾಡಲಾಗುವುದು ಎಂದು ಹೇಳಿದರು ಇದೆ ತಿಂಗಳು 23 ನೇ ತಾರೀಖು ನಡೆಯುವ ಜಯಂತಿಯನ್ನು ಅದ್ಧೂರಿಯಾಗಿ ಮೆರವಣಿಗೆಯ ಮೂಲಕ ಮಿನಿ ವಿಧಾನಸೌಧ ದಿಂದ ಹೊರಟು ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ವರೆಗೆ ಎಲ್ಲಾ ಸಮಾಜದ ಮುಖಂಡರು ಈ ಜಯಂತ್ಸೋವದಲ್ಲಿ ಬಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಗೂಳಿಸಲು ತಾಲೂಕು ದಂಡಾಧಿಕಾರಿಗಳು ತಿಳಸಿದ್ದರು. ಇದೇ ಸಂದರ್ಭದಲ್ಲಿ ತಾಲೂಕು ಆಡಳಿತದ ಎಲ್ಲಾ ಅಧಿಕಾರಿಗಳು ಮತ್ತು ಎಲ್ಲಾ ಸಂಘ ಸಂಘಟನೆಗಳ ಮುಖಂಡರು ಪತ್ರಕರ್ತರು ಈ ಸಭೆಯಲ್ಲಿ ಭಾಗಿಯಾಗಿದ್ದರು
