
ಉದಯವಾಹಿನಿ ಮುದಗಲ್ಲ : ಪಟ್ಟಣದ ಸಾಲಿಮಠದಲ್ಲಿ ನವರಾತ್ರಿ ಉತ್ಸವದಂಗವಾಗಿ ಹಮ್ಮಿಕೊಂಡ ರಾಜ ರಾಜೇಶ್ವರಿ ಮಾತೆಯ ದೇವಿ ಪುರಾಣ ಪ್ರವಚನವು ಸಾಲಿಮಠದ ಸಿದ್ದಯ್ಯ ಸ್ವಾಮಿ ಸಾನಿಧ್ಯದಲ್ಲಿ ವಿಜಯ ದಶಮಿ ಪ್ರಯುಕ್ತ 9 ದಿನಗಳವರೆಗೂ ಪ್ರತಿ ದಿನ ಸಂಜೆ 7 ರಿಂದ 9:30 ಗಂಟೆ ವರಗೆ ನಡೆಯುವ ರಾಜ ರಾಜೇಶ್ವರಿ ಮಾತೆಯ ಪುರಾಣ ಪಠಣ ಮಂಗಳವಾರವು ಮಾತೆಯ ಶ್ರದ್ಧಾ ಭಕ್ತಿ ಯಿಂದ ವೇದ ಘೋಷಗಳೊಂದಿಗೆ ಆರಂಭವಾಯಿತು.ಸಾಲಿಮಠದ ಸಿದ್ದಯ್ಯ ಸ್ವಾಮಿ ಈ ಪುರಾಣದಲ್ಲಿ ಸುಜ್ಞಾನವೆಂದರೆ ದೇವಿ ಹಾಗೂ ಅಜ್ಞಾನವೆಂದರೆ ರಾಕ್ಷಸರು ಇವರಿಬ್ಬರ ನಡುವೆ ನಡೆದ ಧರ್ಮ ಯುದ್ದವೇ ಪುರಾಣದಲ್ಲಿ ಬರುವ ಪ್ರತಿಯೊಂದು ಅಧ್ಯಾಯದ ಸಾರಂಶವಾಗಿದೆ ದೇವಿ ಪುರಾಣ ದೇಹದ ಪುರಾಣವಿದ್ದಂತೆ ದೇವಿ ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ. ಪುರಾಣವೆಂದರೆ ದೇಹದ ಪುರಾಣವಿದ್ದಂತೆ ದೇಹ ದಲ್ಲಿರುವ ಅವಗುಣಗಳನ್ನು ಕಳೆಯುವುದೇ ರಾಕ್ಷಸ ಸಂಹಾರವಿದ್ದಂತೆ ನಮ್ಮಲ್ಲಿ ಇರುವ ದುರ್ಗುಣಗ ಳಾದ ಕಾಮ, ಕ್ರೋಧ, ಮೋಹ, ಮದ, ಮತ್ಸರಗಳನ್ನು ಕಳೆದು ನಮ್ಮಲ್ಲಿಪ್ರೀತಿ,ವಿಶ್ವಾಸ,
ನಂಬಿಕೆ, ಸಂತೋಷ, ಧಾರ್ಮಿಕತೆ ಬೆಳೆಸುತ್ತದೆ ಎಂದರು.ಅದರಂತೆ ಈರಪ್ಪ ಹಡಪದ ಅವರು ಪುರಾಣದಲ್ಲಿ ಸುಜ್ಞಾನ ಮತ್ತು ಅಜ್ಞಾನದ ನಡುವೆ ನಡೆಯುವ ಯುದ್ಧವೇ ದೇವಿ ಪುರಾಣದಲ್ಲಿ ಬರುವ ಮುಖ್ಯಾಂಶವಾಗಿದ್ದು ಶ್ರದ್ಧೆಯಿಂದ ಪುರಾಣ ಆಲಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಶಾಂಭವಿ ಸದ್ಭಕ್ತ ಮಂಡಳಿ,ಹಾಗೂ ವೀರಭದ್ರೇಶ್ವರ ದೇವಸ್ಥಾನ ಮಂಡಳಿ ಸದಸ್ಯರು ಹಾಗೂ ಭಕ್ತರಿದ್ದರು ಉಪಸ್ಥಿತ ರಿದ್ದರು.
