ಉದಯವಾಹಿನಿ,ಚಿಂಚೋಳಿ: ಸರ್ಕಾರ ಪ್ರದಾನ ಮಾಡುವ ಸಹಕಾರ ರತ್ನ ಪ್ರಶಸ್ತಿಗೆ ಸಹಕಾರಿಗಳಿಂದ ಅರ್ಜಿ ಅಹ್ವಾನಿಸಿ ಪ್ರಶಸ್ತಿ ನೀಡುವ ಪದ್ದತಿ ಕೈಬಿಟ್ಟು ಸಹಕಾರ ಇಲಾಖೆ ಅಧಿಕಾರಿಗಳಿಂದ ಗೌಪ್ಯ ಮಾಹಿತಿ ಪಡೆದು ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡುವ ಪದ್ದತಿ ರಾಜ್ಯ ಸರ್ಕಾರ ರೂಪಿಸಿಕೊಳ್ಳಬೇಕು ಎಂದು  ತಾಲ್ಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರಮೇಶ ಯಾಕಾಪೂರ ಒತ್ತಾಯಿಸಿದರು. ಸಹಕಾರ ಇಲಾಖೆ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ಪ್ರತಿ ವರ್ಷ ಸಹಕಾರ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲು ಸಹಕಾರಿಗಳಿಂದ ಅರ್ಜಿಗಳು ಪಡೆದು ಜಿಲ್ಲಾ ಮಟ್ಟದ ಕೇಂದ್ರ ಬ್ಯಾಂಕಗಳ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಿ ಶಿಫಾರಸ್ಸಿನೊಂದಿಗೆ 2-3ಹೆಸರುಗಳು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಕಳೆದ ಐದು ವರ್ಷದಲ್ಲಿ ಯಾವುದೇ ಹೆಸರು ಶಿಫಾರಸ್ಸು ಮಾಡಿದರು ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಅಂಥವರ ಒಬ್ಬರ ಹೆಸರು ಅಂತಿಮ ಗೊಳಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ,ನ್ಯಾಯಸಮ್ಮತ ವೆನಿಸುವುದಿಲ್ಲ ಒಬ್ಬ ವ್ಯಕ್ತಿಯ ಅವರ ಸೇವೆಗೆ ಗೌರವ ಸಲ್ಲಿಸಬೇಕಾದರೆ ಸರ್ಕಾರದ ಇಲಾಖೆ ಅಧಿಕಾರಿಗಳ ಮುಖಾಂತರ ತಾಲ್ಲೂಕು ಮಟ್ಟದ ಸಹಕಾರ ಧುರೀಣರ ಬಗ್ಗೆಯೇ ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿ ಅಂಥವರ ಹೆಸರು ಶಿಫಾರಸ್ಸು ಮಾಡಿ ಗೌರವ ನೀಡಿ ಪ್ರಶಸ್ತಿ ಪ್ರದಾನ ಮಾಡುವುದು ಸರ್ಕಾರದ ನ್ಯಾಯಸಮ್ಮತ ಕ್ರಮವಾಗಿದೆ. ನಾನು ಸುಮಾರು 30ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿವಿದ್ದು ಜಿಲ್ಲಾ ಸಮಿತಿಯವರು ಎರಡು ಬಾರಿ ನನ್ನ ಹೆಸರು ಸಹಕಾರ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದರೂ ನನಗೆ ದೊರಕಲಿಲ್ಲಾ ಆದರಿಂದ ನಾನು ಅರ್ಜಿ ಸಲ್ಲಿಸುವುದು ಬಿಟ್ಟಿರುತ್ತೇನೆ,ಸರ್ಕಾರ ಅರ್ಜಿ ಅಹ್ವಾನಿಸುವ ಪದ್ದತಿ ಬದಲಾಯಿಸಿ ಆಯಾ ಇಲಾಖೆಯ ಅಧಿಕಾರಿಗಳ ಮುಖಾಂತರ ಗೌಪ್ಯ ವರದಿ ಸಂಗ್ರಹಿಸಿ ಆಯ್ಕೆ ಮಾಡುವ ಪದ್ದತಿ ಸೂಕ್ತವಾಗಿದೆ ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!