
ಉದಯವಾಹಿನಿ ಮಸ್ಕಿ: ಮನೆ ದೇವರಿಗೆ ಪೂಜೆ ಸಲ್ಲಿಸಲು ಹೋದವರು ರಸ್ತೆ ಮಧ್ಯದಲ್ಲೆ ಬೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೆ ನಾಲ್ವರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯವಾಗಿರುವ ದಾರುಣ ಘಟನೆ ಜರುಗಿದೆ.ಗೀರವ್ವ(60) ಸೀತವ್ವ(60) ರುಕ್ಮೀಣಿ(40) ಅಶೋಕ(24) ಮೃತ ಪಟ್ಟಿರುವ ದುದೈರ್ವಿಗಳು. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದ ರೇಖಾಪ್ಪ ಎಂಬುವರು ಕೊಟೆಕಲ್ ದುರ್ಗಾದೇವಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಸಂಬಂಧಿಕರೊಂದಿಗೆ ಟಾಟಾ ಏಸ್ ವಾಹನದ ಮೂಲಕ ತೆರಳಿದರು, ಇಲ್ಲಕಲ್ಲ ಸಮೀಪದ ಅಮೀನಗಡ ಬಳಿ ಕ್ರಿಯೆಟ್ ಕಾರಗೆ ಟಾಟಾ ಏಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದು, 15ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯಲು ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮೃತಪಟ್ಟಿರುವರನ್ನು ಸ್ವಗ್ರಾಮ ಮಾರಲದಿನ್ನಿ ತಾಂಡಾದ ತಮ್ಮ ಜಮೀನಿನಲ್ಲಿ ಮಂಗಳವಾರ ಮದ್ಯಾಹ್ನ ಅಂತ್ಯೆಕ್ರಿಯೆ ನೆರವೇರಿಸಲಾಯಿತು, ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತು.ಶಾಸಕರ ಸಹೋದರ ಆರ್, ಸಿದ್ದನಗೌಡ ತುರವಿಹಾಳ, ಮುಖಂಡ ಪ್ರಸನ್ನ ಪಾಟೀಲ, ಬಂಜಾರ ಸಮಾಜದ ಮುಖಂಡ ನಾರಾಯಣ ರಾಠೋಡ್, ಲಾಲಪ್ಪ, ದೇವಪ್ಪ ರಾಠೋಡ, ಅಮರೇಶ ಪವಾರ ಸೇರಿದಂತೆ ಇನ್ನಿತರರು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.
