
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಐನಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿಯು ಎರಡು ತಿಂಗಳಲ್ಲಿ ಪ್ರಾರಂಭಿಸಬೇಕು ಇಲ್ಲಾದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮೀಕೊಳ್ಳಲಾಗುವುದು ಎಂದು ಐನಾಪೂರ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಾನಂದ ಮಾಲಿ ಪಾಟೀಲ್ ಆಗ್ರಹಿಸಿದರು.ಪಟ್ಟಣದ ತಹಸೀಲ್ ಕಛೇರಿಯಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು,ಐನಾಪೂರ ಏತ ನೀರಾವರಿ ಯೋಜನೆ ಜಾರಿಗೆ ಬಂದಿದರೆ ಐನಾಪೂರ ಭಾಗದ ರೈತರ ಬದುಕು ಹಸನವಾಗುತ್ತದೆ ಎಂಬ ರೈತರ ಆಶಾಭಾವನೆಯಾಗಿದೆ.ಈಗಾಗಲೇ ಐನಾಪೂರ ಏತ ನೀರಾವರಿ ಯೋಜನೆಯು ಸರ್ಕಾರದಿಂದ 210ಕೋಟಿ ರೂ.ಮಂಜೂರುಗೊಂಡಿದ್ದು ಸರ್ಕಾರ ಯೋಜನೆಗೆ ಚಾಲನೆ ನೀಡಿ ರೈತರ ಜಮೀನುಗಳಿಗೆ ನೀರುಣಿಸುವಂತೆ ರೈತರ ಮೇಲೆ ಕರುಣೆ ತೋರಬೇಕು.ಈ ಭಾಗದ ರೈತರ ಸುಮಾರು 3710ಹೇಕ್ಟರ್ ಭೂಪ್ರದೇಶದ ನೀಲಿ ನಕಾಶೆ ಮತ್ತು ಅಂದಾಜು ಪತ್ರಿಕೆ ಪೂರ್ಣಗೊಂಡು ಹಿಂದಿನ ಸರ್ಕಾರ ಮಂಜೂರುಗೊಳಿಸಿದೆ,ಪ್ರಸ್ತುತ ಸರ್ಕಾರವು ತಾರತಮ್ಯ ಅನುಸರಿಸದೆ ಈ ಭಾಗದ ರೈತರ ಆಶಾಭಾವನೆಯಾಗಿದ್ದ ಏತ ನೀರಾವರಿ ಯೋಜನೆ ಜಾರಿಗೆಗೊಳಿಸಿ ರೈತರ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕು.
ಈ ಯೋಜನೆಯು ಮುಂದಿನ ಅರವತ್ತು ದಿನಗಳಲ್ಲಿ ಕೆಲಸ ಪ್ರಾರಂಭಿಸಬೇಕು ಇಲ್ಲಾದಿದ್ದರೆ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ವತಿಯಿಂದ ತಮ್ಮ ಜೀವದ ಹಂಗನ್ನು ತೊರೆದು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.
