
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ನಿವೃತ್ತ ನೌಕರರು ಪಿಂಚಣಿ ಪಡೆಯುತ್ತಿರುವ ಬ್ಯಾಂಕಿನಲ್ಲಿ ತಮ್ಮ ತಮ್ಮ ಜೀವತ ಪ್ರಮಾಣಪತ್ರವನ್ನು ನ.25ರ ಒಳಗೆ ಸಲ್ಲಿಸಬೇಕು ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ರಾಜೇಂದ್ರ ತಾದಲಾಪೂರ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರಿ ನಿವೃತ್ತ ಪಡೆದ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಪಿಂಚಣಿ ಪಡೆಯುತ್ತಿರುವ ತಮ್ಮ ಬ್ಯಾಂಕಿನಲ್ಲಿ ಜೀವತ ಪ್ರಮಾಣಪತ್ರವನ್ನು ತಪ್ಪದೆ ಸಲ್ಲಿಸಿ ಪಿಂಚಣಿ ಪಡೆಯಬೇಕು ಇಲ್ಲಾದಿದ್ದರೆ ಪಿಂಚಣಿ ನಿಲ್ಲುವ ಸಂಭವ ಇರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
