??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಉದಯವಾಹಿನಿ ಶಿಡ್ಲಘಟ್ಟ: ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಇಡಿ ಕರ್ನಾಟಕದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಈ ಬಾರಿ ರಾಜ್ಯ ಸರ್ಕಾರ ಕನ್ನಡ ಭಾವುಟ ಹಾರಿಸಬೇಕು ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಸಮಾನ ಮನಸ್ಕರರ ವೇದಿಕೆಯ ಸದಸ್ಯ ವಿಸ್ಡಂ ನಾಗರಾಜ್ ತಿಳಿಸಿದರು.ನಗರದ ಟಿಬಿ ರಸ್ತೆಯಲ್ಲಿರುವ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಕಛೇರಿಯಲ್ಲಿ ಕನ್ನಡಪರ ಹಾಗೂ ಎಲ್ಲಾ ಸಮಾನ ಮನಸ್ಕರರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 1ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಿ ನಂತರ 150×8 ಅಡಿ ಉದ್ದದ ಕನ್ನಡದ ಬಾವುಟ ಹಾಗೂ 200ಬಾವುಟಗಳ ಪ್ರದರ್ಶನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಮಾಡಲಾಗುತ್ತದೆ. ತಾಲ್ಲೂಕಿನ ಎಲ್ಲಾ ೨೮ ಪಂಚಾಯಿತಿಗಳಿಂದಲೂ ಭವನೇಶ್ವರಿ ತಾಯಿ ಪಲ್ಲಕ್ಕಿಗಳ ಮೆರವಣಿಗೆ ಮಾಡಲಾಗುತ್ತದೆ ಎಂದರು.ಸಮಾನ ಮನಸ್ಕರರ ವೇದಿಕೆಯ ಸದಸ್ಯ ರಾಮಾಂಜನೇಯ ಮಾತನಾಡಿ ನ.1 ರಂದು ಸಂಜೆ 5  ಗಂಟೆಗೆ ನಗರದ ಕೋಟೆ ವೃತ್ತದ ವೇದಿಕೆ ಕಾರ್ಯಕ್ರಮದಲ್ಲಿ ಹತ್ತನೇತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ10 ವಿದ್ಯಾರ್ಥಿಗಳಿಗೆ ಸನ್ಮಾನ,ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರ ರಸಮಂಜರಿ ಕಾರ್ಯಕ್ರಮಗಳು, ನಾಟಕ,ರೂಪಕ,ಹಾಡುಗಾರಿಕೆ,ನೃತ್ಯ ಪ್ರದರ್ಶನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಎಂದು ತಿಳಿಸಿದರು.
ಸಮಾನ ಮನಸ್ಕರರ ವೇದಿಕೆಯ ಸದಸ್ಯರ ಎಸ್ ಎಂ ರವಿಪ್ರಕಾಶ್ ಮಾತನಾಡಿ, ಎಲ್ಲಾ ಸಂಘ ಸಂಸ್ಥೆಗಳು ಸೇರಿ ಈ ಬಾರಿ ಅದ್ದೂರಿಯಾಗಿ ಕನ್ನಡರಾಜ್ಯೋತ್ಸವ ಆಚರಿಸುತ್ತಿದ್ದೇವೆ ಈ ಕಾರ್ಯಕ್ರಮಕ್ಕೆ ಕನ್ನಡದ ಹಾಸ್ಯ ನಟ ಟೆನ್ನಿಸ್ ಕೃಷ್ಣ,ಚಿತ್ರನಟ ವಿನೋದ್ ಪ್ರಭಾಕರ್, ಮಿಮಿಕ್ರಿ ಕಲಾವಿಧ ದೀಕ್ಷಿತ್ ಮತ್ತು ಉದಯ ಟಿವಿ ಕಾಮಿಡಿ ನಟಿ ರಾಜೇಶ್ವರಿ,ಚಿಟ್ನಹಳ್ಳಿ ರಾಮಚಂದ್ರ, ನಿರೂಪಕರಾಗಿ ಮಂಜುಳ ಕೊಂಡರಾಜನಹಳ್ಳಿ,ಕಲಾವಿದ ಸಿ.ಎನ್ ಮುನಿರಾಜು, ಅವರ ತಂಡ ಆಗಮಿಸಲಿದ್ದು, ತಾಲ್ಲೂಕಿನಾದ್ಯಂತ ಎಲ್ಲಾ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು.
 ಈ ಸಂದರ್ಭದಲ್ಲಿ ಸಮಾನ ಮನಸ್ಕರರ ವೇದಿಕೆಯ ಸದಸ್ಯರಾದ ಭಕ್ತರಹಳ್ಳಿ ಪ್ರತೀಶ್,ಟಿಪ್ಪು ಮೌಲ, ಮುಷ್ಟಕ್ ಅಹ್ಮದ್,ನಾಗಭೂಷಣ್,
ದೇವಪ್ಪ,ಶ್ರೀರಾಮ್,ಯುವರತ್ನ ಸುನೀಲ್ ಎ,ಶ್ರೀಮತಿ ಮಧುಲತ,ಪ್ರದೀಪ್,ಡೆಡ್ಲಿ ಸೋಮು,ಮತ್ತಿತರರು ಇದ್ದರು.
One attachment • Scanned by Gmail

Leave a Reply

Your email address will not be published. Required fields are marked *

error: Content is protected !!