ಉದಯವಾಹಿನಿ, ಕೋಲಾರ : ಬಿಜೆಪಿ ಅವರು ಮಾಡಿದ್ದೇ ತಪ್ಪು, ಕೊಟ್ಟಿದ್ದೇ ತಪ್ಪು ಎನ್ನುವುದಾದರೆ ಕಣ್ಣಿಗೆ ಕಾಣುವ ದೇವರು ಇರೋದೆ ನ್ಯಾಯಾಲಯ ಘನ ನ್ಯಾಯಾಲಯ ಇದನ್ನ ಎತ್ತಿ ಹಿಡಿದಿದೆ ಅದಕ್ಕೇನು ಆರೋಪ ಮಾಡುತ್ತಾರೆ ಎಂದು ಡಿಕೆಶಿ ಸಿಬಿಐ ಪ್ರಕರಣ ಸಂಬಂಧ ಬಿಜೆಪಿ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಟಾಂಗ್ ನೀಡಿದರು.ನಗರದ ಭಕ್ತ ಕನಕ ದಾಸರ ೫೩೬ ನೇ ಜಯಂತಿಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಲಯನೇ ಹೇಳಿದೆ ಬಿಜೆಪಿ ಅವರು ಮಾಡಿರುವುದು ತಪ್ಪು ಎಂದು ಕಾಂಗ್ರೆಸ್ ಅದನ್ನ ತೆಗೆದುಹಾಕಿರುವುದು ಸರಿ ಎಂದು ಘನ ನ್ಯಾಯಾಲಯ ಹೇಳಿದೆ ಹೀಗಾಗಿ ಘನ ನ್ಯಾಯಾಲಯವನ್ನ ಕಾಮೆಂಟ್ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಬಿ.ಆರ್.ಪಾಟೀಲ್ ಆರೋಪಕ್ಕೆ ಕೋಲಾರದಲ್ಲಿ ಪ್ರತಿಕ್ರಿಯಿಸಿದ ಅವರು, ಅಳಂದ ಶಾಸಕ ಬಿ.ಆರ್.ಪಾಟೀಲ್ ಹಾಗೂ ಸಿದ್ದರಾಮಯ್ಯ ಸ್ನೇಹಿತರು ನಿನ್ನೆ ರಾತ್ರಿ ಬಂದು ಅವರಿಬ್ಬರು ತಿಂಡಿ ತಿಂದು ಕಾಫಿ ಕುಡಿದಿದ್ದಾರೆ. ಭ್ರಷ್ಟಾಚಾರ ಎಂದು ಅವರು ಹೇಳಿಲ್ಲ, ಕೃಷ್ಣ ಬೈರೇಗೌಡ ಹೇಳಿದ್ದು, ಬಿ.ಆರ್.ಪಾಟೀಲ್ ತಿಳಿದುಕೊಂಡಿದ್ದು ಕನ್ಫ್ಯೂಷಿಯನ್ ಇದೆ ಅಷ್ಟೆ ಎಂದರು.
ಮುಖ್ಯಮಂತ್ರಿಗಳು ಹೇಳಿದ್ದಾರೆ ಅವರಿಬ್ಬರು ಕುಳಿತು ಮಾತನಾಡುತ್ತಾರೆ ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು. ಸರ್ಕಾರ ಸೂಸೈಡ್ ಮಾಡಿಕೊಂಡಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಸಚಿವ ಸುರೇಶ್ ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಬಗ್ಗೆ ಏನಾದರೂ ಕೇಳಿ ಹೇಳುತ್ತೇನೆ. ಅವರು ಡೈಲಿ ಹೇಳುತ್ತಿರುತ್ತಾರೆ ಬೆಳಗ್ಗೆ ಮಧ್ಯಾಹ್ನ ಸಂಜೆ, ಎಲ್ಲದಕ್ಕೂ ಉತ್ತರ ನೀಡಲು ಆಗುತ್ತಾ ಎಂದರು.
