ಉದಯವಾಹಿನಿ, ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಅಪ್ಪನ ಶಖಾಪೂರ (ಭೀ.ಗುಡಿಯ) ಸಿದ್ಧಕೂಲ ಸಾಮ್ರಾಟ ವಿಶ್ವರಾಧ್ಯರ 23ನೇ ಜಾತ್ರಾ ಮಹೋತ್ಸವ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯಲಿದೆ.
ಸುಕ್ಷೇತ್ರ ಅಬ್ಬೆತುಮಕೂರ ಹಾಗೂ ಅಪ್ಪನ ಶಖಾಪೂರ ಉಭಯ ಮಠದ ಪೀಠಾಧಿಪತಿಗಳಾದ ಡಾ.ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜ.25 ರಂದು ಸಂಜೆ 6 ಗಂಟೆಗೆ ನೂತನ ಉಚ್ಛಾಯಿ ಕಾರ್ಯ ಜರುಗುವುದು. 26 ರಂದು ಸಾಯಂಕಾಲ 4 ಗಂಟೆಗೆ ಸದ್ಗುರು ವಿಶ್ವರಾಧ್ಯರ ಪಾದುಕೆಗಳ ಆಗಮನ ಹಾಗೂ ಪಲ್ಲಕ್ಕಿ ಉತ್ಸವ, ಸಾಯಂಕಾಲ 6 ಗಂಟೆಗೆ ರಥೋತ್ಸವ, ನಂತರ ಧರ್ಮಸಭೆ ಜರುಗುವುದು.ಸಮಾರಂಭದಲ್ಲಿ ನಾಡಿನ ಪೂಜ್ಯರು, ಸಂತರು ಹಾಗೂ ರಾಜಕೀಯ ಧುರೀಣರು, ಕಲಾವಿದರು ಉಪಸ್ಥಿತರಿರಲಿದ್ದಾರೆ.
